ಗ್ರಾಮ ಪಂಚಾಯತಿಯಲ್ಲಿ ವಯೋ ನಿವೃತ್ತಿ ಹೊಂದಿದ ಬಿಲ್ ಕಲೆಕ್ಟರ್ ಗೆ ಸನ್ಮಾನ

ಲಿಂಗಸಗೂರು ಗ್ರಾಮ ಪಂಚಾಯತ್ ಕಾರ್ಯಾಲಯ ನಾಗರಹಾಳ ವತಿಯಿಂದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ನಾಗರಹಾಳ, ಹಲ್ಕಾವಟಗಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಮತ್ತು ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಬಿಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಹೌದು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ನಾಗರಹಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಕಾರ್ಯದರ್ಶಿಗಳು ಇವರಿಗೆ ಹೂಗುಚ್ಛ ನೀಡುವುದರ ಮೂಲಕ ಸ್ವಾಗತಿಸಲಾಯಿತು. ಇನ್ನು ಸ್ವಾಗತ ಭಾಷಣವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮನಗೌಡ ಪಾಟೀಲ ನೆರವೇರಿಸಿದರು. ಈ ವೇಳೆ ಹದಿನೈದು ವರ್ಷಗಳ ಕಾಲ ನಾಗರಹಾಳ ಹಾಗೂ ಹಲ್ಕಾವಟಗಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ, ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಶೇಖರಪ್ಪ ಸಂಗಪ್ಪ ಮೇಟಿ ಇವರಿಗೆ ನಾಗರಹಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿವರ್ಗ ಹಾಗೂ ಊರಿನ ಗ್ರಾಮಸ್ಥರು ಸೇರಿ ಶಾಲು ಹೊದಿಸಿ ಹೂ ಮಾಲೆ ಹಾಕಿ ಸನ್ಮಾನಿಸಲಾಯಿತು.
ಐದು ವರ್ಷಗಳ ವರೆಗೆ ಸೇವೆ ಸಲ್ಲಿಸಿದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಶ್ರೀಗುರುಯ್ಯ ಸ್ವಾಮಿ ಹಿರೇಮಠ ಅಲಂಕರಿಸಿದ್ದರು. ಈ ಸಂದರ್ಭದಲ್ಲಿ ಹೊನ್ನಪ್ಪ ಮೇಟಿ, ಶಿವನಗೌಡ, ಬಸವರಾಜ ಬಿರದರ್,ನಿಂಗನಗೌಡ ಪಾಟೀಲ್, ದೊಡ್ಡಪ್ಪ ಮೇಟಿ, ಸಾಬಣ್ಣ ಮುಕ್ಕಣ್ಣವರ, ರಮೇಶ ಗುತ್ತೆದಾರ್,ಹಾಗೂ ನಾಗರಹಾಳ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೀರೇಶ್ ಅರಮನಿ ಎಕ್ಸ್‌ಪ್ರೆಸ್ ಟಿವಿ ಲಿಂಗಸಗೂರು

Please follow and like us:

Related posts

Leave a Comment