ಭಾರತೀಯರನ್ನ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದ ಸೋನು ಸೂದ್..!

ಮುಂಬೈ : ಕೊರೊನಾ ಸಂಕಷ್ಟದ ವೇಳೆ ಅಗತ್ಯವಸ್ತು ಸೇರದಿಂತೆ ಹಲವು ಜನರ ಸಮಸ್ಯೆಗಳ ಸಂಕಷ್ಟಕ್ಕೆ ಬಾಲಿವುಡ್ ನಟ ಸೋನು ಸೂದ್ ನೆರವಾಗಿದ್ದರು. ಇತ್ತಿಚೆಗೆ ಟೆಕ್ಕಿಯೊಬ್ಬರು ಕೆಲಸ ಕಳೆದುಕೊಂಡು ತರಕಾರಿ ವ್ಯಾಪಾರ ಮಾಡುತ್ತಿದ್ದ ಯುವತಿಗೆ ನೌಕರಿ ನೀಡಿದ್ದಾರೆ. ಹೀಗೆ ಜನರ ಸಮಸ್ಯೆಗೆ ಸ್ಪಂದಿಸಿದ ಸೋನು, ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಫಿಲಿಪೈನ್ಸ್ನಲ್ಲಿದ್ದ ಭಾರತೀಯರನ್ನ ಕರೆ ತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ಸ್ವದೇಶಕ್ಕೆ ಕರೆಸಲಾಗಿದ್ದು, ಇದೀಗ 2ನೇ ಹಂತವಾಗಿದೆ. ಈಗಾಗಲೇ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಎರಡನೇ ಹಂತದಲ್ಲಿ ತಾಯ್ನಾಡಿಗೆ ಬಂದು ಇಳಿಯಲಿದ್ದಾರೆ. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಸೋನು ಸೂದ್ ನಿಮ್ಮ ಕುಟುಂಬದವರನ್ನ ಭೇಟಿಯಾಗೋದಕ್ಕೆ ಸಿದ್ಧರಾಗಿದ್ದೀರಿ ಅಂತಾ ನಾನು ನಂಬಿದ್ದೇನೆ ಎಂದು ಕೂಡ ಬರೆದುಕೊಂಡಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment