ಬಾಗಲಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ‌ ಡಿಸಿಎಂ ಕಾರಜೋಳ…!

ಬಾಗಲಕೋಟೆಯ ಜಿಲ್ಲಾಡಳಿತದಿಂದ ನವನಗರದ ಜಿಲ್ಲಾ‌ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳನೆರವೇರಿಸಿದರು.
ಬಳಿಕ ಪೊಲೀಸ್ ಇಲಾಖೆ‌ ಹಾಗೂ ಗೃಹ ರಕ್ಷಕ ದಳದ ಪರೇಡ ವೀಕ್ಷಣೆ ಮಾಡಿದ್ದು, ಆಕರ್ಷಕ ಪಥಸಂಚಲನ ಕೂಡ ನಡೆಯಿತು.
ಈ ಭಾರಿ ಕೊರೋನಾ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಎನ್ ಸಿಸಿ ಕ್ಯಾಡೆಟ್ , ಸ್ಕೌಟ್ಸ್ ಗೈಡ್ಸ ಅವರ ಪರೇಡ ಇರಲಿಲ್ಲ.
ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದರು.ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರ ಕೊಡುಗೆ ಅಪಾರವಾಗಿದೆ ಎಂದರು.
ಕೊರೋನಾ‌ ಸೋಂಕು‌‌ ನಿಯಂತ್ರಣಕ್ಕೆ ಸೇವೆ ಸಲ್ಲಿಸಿದ ಕೋವಿಡ್-೧೯ ವಾರಿಯರ್ಸ್‌ ಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಸಂಸದ‌ ಪಿ.ಸಿ.ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ, ಜಿ.ಪಂ.ಅಧ್ಯಕ್ಷೆ ಬಾಯಕ್ಕ ಮೇಟಿ, ನಗರಸಭೆ ಸದಸ್ಯ ರವಿ‌ ಧಾಮಜಿ, ತಾ.ಪಂ ಅಧ್ಯಕ್ಷೆ ಚನ್ನನಗೌಡ ಪರನಗೌಡರ,ವಿ.ಪ.ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ , ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ,ಎಸ್ಪಿ ಲೋಕೇಶ ಜಗಲಾಸಾರ, ಸಿಇಓ‌ ಭೂಬಾಲನ್ ಇದ್ದರು.

Please follow and like us:

Related posts

Leave a Comment