ಅರಣ್ಯ ಭೂಮಿಯನ್ನು ಬಿಡದ ಭೂ-ಕಬಳಿಕೆದಾರರು.. ಕೋರ್ಟ್ ಮೆಟ್ಟಿಲೇರಿ ಜಾಗ ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು…!

ಬೆಂಗಳೂರು: ಹಲವು ವರ್ಷಗಳಿಂದ ಅಲ್ಲಿನ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಹೆಸರಿನಲ್ಲಿ ಅರಣ್ಯ ಭೂಮಿ ಲಪಟಾಯಿಸಲು ಮುಂದಾದವರ ಮೇಲೆ ಕೋರ್ಟಿನಲ್ಲಿ ಕೇಸು ದಾಖಲಿಸಿ ಹೈಕೋರ್ಟ್ ಅರಣ್ಯ ಇಲಾಖೆ ಅಧಿಕಾರಿಗಳ ಪರವಾಗಿ ನ್ಯಾಯ ಮಂಡಿಸಿದ ಹಿನ್ನೆಲೆಯಲ್ಲಿ 350 ಕೋಟಿಗೂ ಹೆಚ್ಚು ಬೆಲೆಬಾಳುವ ಅರಣ್ಯಭೂಮಿಯನ್ನು ಅಧಿಕಾರಿಗಳು ವಶಪಡಿಸಿಕೊಂಡು ಗಿಡ ನೆಡುವ ಮೂಲಕ ಅರಣ್ಯಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೆಸಿಬಿಗಳ ಮೂಲಕ ಹಳ್ಳ ತೋಡಿ ಗಿಡಗಳನ್ನು ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಕಾಡಂಚಿನ ಭೂತಾನಹಳ್ಳಿಯಲ್ಲಿ ಕೆಲವು ಜನಪ್ರತಿನಿಧಿಗಳು ಹಾಗೂ ಪ್ರತಿಷ್ಟಿತ ಕಾಲೇಜು ಆಡಳಿತ ಮಂಡಳಿಯವರು ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಭೂಮಿಯನ್ನು ತೆರವು ಮಾಡಿ ಸುಮಾರು 350 ಕೋಟಿ ಬೆಲೆಬಾಳುವ ಅರಣ್ಯ ಭೂಮಿಯನ್ನು ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿ ಸರ್ವೆ ನಂ-67ರಲ್ಲಿ 35 ಎಕರೆ ಭೂಮಿಯನ್ನು ಮೂರು ಜೆ.ಸಿ.ಬಿ ಗಳ ಮೂಲಕ ದಕ್ಷಿಣ ಎಸಿಎಫ್ ಜಿ.ವೆಂಕಟೇಶ್, ಕಗ್ಗಲೀಪುರ ಆರ್.ಎಪ್.ಓ ಗೋಪಾಲ್,ಆನೇಕಲ್ ವಲಯ ಅರಣ್ಯಧಿಕಾರಿ ಎಸ.ಆರ್ ಕ್ರಷ್ಣ ನೇತ್ರತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.ಇನ್ನು ಅರಣ್ಯಭೂಮಿ ಒತ್ತುವರಿ ಯಲ್ಲಿ ರೈತರಿಗಿಂತ ಬಹುತೇಕ ಜನಪ್ರತಿನಿಧಿಗಳು, ಬಲಾಢ್ಯರು, ಕಾಲೇಜುಗಳ ಮಾಲೀಕರು, ಪೊಲೀಸ್ ಅಧಿಕಾರಿಗಳು ಇರುವುದು ಕಂಡುಬಂದಿದ್ದು ಯಾರೇ ಆಗಿದ್ದರೂ ಅರಣ್ಯ ಭೂಮಿಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ. ಭೂತಾನಹಳ್ಳಿ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದಿದ್ದ ಜಾಗವನ್ನು ಉಳಿಸಿಕೊಳ್ಳಲು ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು. ಇದರ ವಿರುದ್ಧವಾಗಿ ಅರಣ್ಯ ಇಲಾಖೆಯಿಂದಲೂ ಕೂಡ ಕೇಸು ದಾಖಲಿಸಲಾಗಿತ್ತು.ಕೇಸ್ ವಜಾ ಆಗಿದ್ದ ಹಿನ್ನೆಲೆಯಲ್ಲಿ ಭೂಮಿ ವಶಕ್ಕೆ ಪಡೆಯಲಾಗಿದ್ದು ಇಂದು ಬೆಳಿಗ್ಗೆಯಿಂದ ಜಿ.ಸಿ.ಬಿಗಳಿಂದ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದ ಭೂಮಿಯಲ್ಲಿ ಗಿಡ ನೆಡುವ ಮೂಲಕ 35 ಎಕರೆ ಅರಣ್ಯಭೂಮಿಯನ್ನು ಸುಪರ್ದಿಗೆ ಪಡೆದರು. ಕಗ್ಗಲಿಪುರ ವಲಯ ಅಧಿಕಾರಿ, ಕೆ.ಆರ್ ಪುರಂ ವಲಯ ಅರಣ್ಯ ಅಧಿಕಾರಿ, ಬನ್ನೇರುಘಟ್ಟ ಅರಣ್ಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿದ್ದು.. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಒತ್ತುವರಿ ಮಾಡಿದ ಅರಣ್ಯಭೂಮಿಯನ್ನು ತೆರವು ಮಾಡಿ ವಶಕ್ಕೆ ಪಡೆಯುವುದಾಗಿ ಆನೇಕಲ್ ವಲಯ ಅರಣ್ಯ ಅಧಿಕಾರಿ ಕೃಷ್ಣ ತಿಳಿಸಿದರು. ಒಟ್ಟಿನಲ್ಲಿ ಬೆಂಗಳೂರಿನ ಸುತ್ತಮುತ್ತ ಭೂಮಿಗೆ ಚಿನ್ನದ ಬೆಲೆ ಬಂದಿದ್ದು ಪ್ರಭಾವಿಗಳು ಹಾಗೂ ರಾಜಕಾರಣಿಗಳು ಪ್ರತಿಷ್ಠಿತ ಕಾಲೇಜಿನ ಆಡಳಿತ ಮಂಡಳಿ ಕೋಟಿಗಟ್ಟಲೆ ಬೆಲೆಬಾಳುವ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು ಇಂತಹ ಭೂಗಳ್ಳರಿಗೆ ನ್ಯಾಯಾಲಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್.

Please follow and like us:

Related posts

Leave a Comment