ಹಾಸನ ಮಾದರಿ ಕೋಲಾರದಲ್ಲೂ ಕೂಡ ಆಲೂಗಡ್ಡೆ ಭಿತ್ತನೆ ಬೀಜ ದರ ನಿಗದಿಪಡಿಸ ಬೇಕೆಂದು ಆಗ್ರಹ…!

ಕೋಲಾರ: ಕೋಲಾರ ಜಿಲ್ಲಾ ರೈತರ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ಆಲೂಗಡ್ಡೆ ಬಿತ್ತನೆ ಬೀಜಗಳಿಗೆ ಭಾರಿ ಡಿಮಾಂಡ್ ಇದೆ, ಆದ್ರೆ ಇದನ್ನೇ ಬಂಡಾವಾಳ ಮಾಡಿಕೊಂಡಿರುವ ಕೆಲವು ಏಜೆಂಟ್ ಗಳು ತಮಗೆ ಬೇಕಾದ ರೀತಿಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜವನ್ನು ನಿಗದಿತ ದರಕ್ಕಿಂತ ದುಪ್ಪಟ್ಟು ಮಾರಾಟ ಮಾಡಿ ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ಹಾಸನ ಮಾದರಿ ಕೋಲಾರದಲ್ಲೂ ಕೂಡ ಬೀಜದ ಬೆಲೆಯನ್ನು ಸರ್ಕಾರ ನಿಗದಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದಿಂದ ಕೋಲಾರ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಡಿಸಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು. ಟೊಮ್ಯಾಟೊ ಹಾಗೂ ಆಲೂಗಡ್ಡೆ ಬೆಳೆ ಜಿಲ್ಲೆಯ ರೈತರ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿದೆ, ಏಜೆಂಟ್ ಗಳು 100 ಕೆ.ಜಿ ಆಲೂಗಡ್ಡೆ ಭಿತ್ತನೆ ಬೀಜವನ್ನು 5 ಸಾವಿರದಿಂದ 6 ಸಾವಿರದವರೆಗೂ ಮಾರಾಟ ಮಾಡುತ್ತಿದ್ದಾರೆ. ಹಾಸನದಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಅಲ್ಲಿನ ಜಿಲ್ಲಾಧಿಕಾರಿ ಮುಖಾಂತರ 100 ಕೆಜಿ ಆಲೂಗಡ್ಡೆ ಬೀಜಕ್ಕೆ ಕೇವಲ 2200 ರೂಪಾಯಿ ನಿಗದಿ ಮಾಡಿ ಅಲ್ಲಿನ ರೈತರಿಗೆ ನೆರವಾಗಿದೆ, ಕೋರೊನಾ ಸಮಯದಲ್ಲಿ ಈಗಾಗಲೇ ತೀವ್ರ ತೊಂದರೆಗೆ ಸಿಲುಕಿರುವ ಕೋಲಾರ ಜಿಲ್ಲೆಯ ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕಿದೆ. ಕೋಲಾರದಲ್ಲಿ ಕೂಡ ಹಾಸನ ಮಾದರಿ ಭಿತ್ತನೆ ಬೀಜದ ದರವನ್ನು ಜಿಲ್ಲಾಡಳಿತ ನಿಗದಿಪಡಿಸಿ ರೈತರ ನೆರವಿಗೆ ಬರಬೇಕೆಂದು ಕರವೇ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.

ವರದಿ-ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment