ಕೊಪ್ಪಳದ ಬಿಜೆಪಿ ಶಾಸಕರಿಗೆ ಕೊರೊನಾ ಸೋಂಕು ದೃಡ..! ಜೊತೆಯಲ್ಲಿದ್ದ ಆಪ್ತರಿಗೆ ಹೆಚ್ಚಿದ ಆತಂಕ…

ಸಿಂಧನೂರು :ಕೊಪ್ಪಳ ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲಿ ಚಿಕಿತ್ಸೆ ಒಳಗಾಗಿದ್ದಾರೆ. ಮಂಗಳವಾರ ಅಷ್ಟೇ ಕರಡಿ ಸಂಗಣ್ಣ ಅವರು ಸಿಂಧನೂರು ನಗರಸಭೆಗೆ ನಾಮ ನಿರ್ದೇಶನಗೊಂಡ ಸದಸ್ಯರುಗಳನ್ನ ಸನ್ಮಾನಿಸಿದ್ದರು. ಅಲ್ಲದೇ ಹಲವರನ್ನ ಭೇಟಿ ಮಾಡಿದ್ದು, ಇದೀಗ ಅವರೆಲ್ಲರಿಗೂ ಕೊರೋನಾ ಆತಂಕ ಶುರುವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಗಣ್ಣ ಕರಡಿ, ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಭೇಟಿಯಾದ ಕಾರ್ಯಕರ್ತರು ಹಾಗೂ ಮುಖಂಡರು ಯಾರಿಗಾದರೂ ಕೊರೋನಾ ಲಕ್ಷಣ ಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಿ. ಕ್ಷೇತ್ರದ ಜನರ ತುರ್ತು ಕೆಲಸಗಳಿಗೆ ನನ್ನ ಆಪ್ತ ಸಹಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.

ವರದಿ- ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment