ಸೈದಾಪುರದಲ್ಲಿ ವಠಾರ ಶಾಲೆ ಪ್ರಾರಂಭ…!

ಶಹಾಪುರ: ಕರೋನಾ ವೈರಸ್ ಮಹಾಮಾರಿಯಿಂದ ಇನ್ನೂ ಶಾಲೆ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸದಿಂದ ಹಿಂದುಳಿಯದಂತೆ ತಾಲ್ಲೂಕಿನ ಸೈದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಗ್ರಾಮದ ಪಿಲಕಮ್ಮ ದೇವಸ್ಥಾನದ ಆವರಣದಲ್ಲಿ ವಠಾರ ಶಾಲೆ ಪ್ರಾರಂಭಿಸಲಾಯಿತು.

ಗ್ರಾಮದ ದೇವಸ್ಥಾನದ ಆವರಣ,ಪಂಚಾಯಿತಿ ಆವರಣ,ಇನ್ನಿತರ ಗುಡಿ ಗುಂಡಾರಗಳಲ್ಲಿ ವಠಾರ ಶಾಲೆ ಪ್ರಾರಂಭಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಬೋಧಿಸುವುದರ ಜೊತೆಗೆ ಕೋರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಕೈ ಕಾಲು ತೊಳೆದುಕೊಳ್ಳುವಂತೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು.

ಕಳೆದ ಐದಾರು ತಿಂಗಳಿನಿಂದ ಶಾಲೆ ಪ್ರಾರಂಭವಾಗದಿರುವುದರಿಂದ ಬೇಜಾರಲ್ಲಿದ್ದ ಮಕ್ಕಳು ಖುಷಿಯಿಂದಲೇ ವಠಾರ ಶಾಲೆಗೆ ಆಗಮಿಸಿ ಪಾಠ ಆಲಿಸಿದರು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರಾದ ಭಾಗ್ಯ,ಸುನಿತಾ, ಸಾವಿತ್ರಿ, ಹಾಗೂ ಇತರರು ಇದ್ದರು

Please follow and like us:

Related posts

Leave a Comment