ಶಹಾಪುರ: ಅನುದಾನ ಬಿಡುಗಡೆಗಾಗಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಸದಸ್ಯರಿಂದ ಒತ್ತಾಯ..!

ಶಹಾಪುರ : ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಮುಂದೆ ಸರ್ವ ಸದಸ್ಯರು ಆದ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ಪ್ರತಿಭಟನೆ ಹಮ್ಮಿಕೊಂಡು ಅಭಿವೃದ್ಧಿಗಾಗಿ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. 2019 – 20 ಸಾಲಿನ ತಾಲ್ಲೂಕು ಪಂಚಾಯಿತಿ ಸಮಗ್ರ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು ಸರ್ಕಾರ ಅದನ್ನು ಪಡೆದಿರುವ ಸಲುವಾಗಿ ಇಂದು ಬ್ರೇಕ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ‌ ಸರ್ಕಾರ ಅನುದಾನ ಹಿಂಪಡೆದಿರುವುದು ಅದೇಷ್ಟು ಸರಿ ಎಂದು ಸದಸ್ಯರುಗಳು ಪ್ರಶ್ನೆ ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಮುಖಾಂತರ ಪಂಚಾಯತ್ ರಾಜ್ ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಿಜೆಪಿ ಸರ್ಕಾರ ಬಂದಾಗಿನಿಂದ ದ್ವೇಷದ ರಾಜಕಾರಣ ಮಾಡುತ್ತಾ ಅನುದಾನವನ್ನು ಕಡಿತಗೊಳಿಸುತ್ತಿದೆ, ಆದರೆ ಇದು ಸರಿಯಲ್ಲ ಎಂದು ಒಕ್ಕೊರಲಿನಿಂದ ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ನಾಗಣ್ಣ, ಪೂಜಾರಿ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಬಸವಂತರೆಡ್ಡಿ ಸಾಹು ಹತ್ತಿಗೂಡುರ.ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಿತ್ರಶೇಖರ್ ಪೋಲಿಸ್ ಪಾಟೀಲ, ಸಿದ್ದಲಿಂಗಪ್ಪಗೌಡ ಮಾಲಿ ಪಾಟೀಲ್ ಭಾಶು ನಾಯಕ್, ನಿಂಗಪ್ಪ, ನಿಜಗುಣ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ- ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment