ಸಗರದಲ್ಲಿ ಮಳೆಗೆ ಬಿದ್ದ ಮನೆ…ಪರಿಹಾರಕ್ಕಾಗಿ ಆಗ್ರಹ!

ಶಹಾಪುರ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಸಗರ ಗ್ರಾಮದಲ್ಲಿ ನಿನ್ನ ಮಧ್ಯಾಹ್ನದ ಹೊತ್ತಿಗೆ ಮತ್ತೊಂದು ಮನೆ ಬಿದ್ದಿರುವುದು ವರದಿಯಾಗಿದೆ ಸುರಿಯುತ್ತಿರುವ ಮಳೆಗೆ ಒಂದೇ ವಾರದಲ್ಲಿ ಎರಡು ಮನೆಗಳು ಬಿದ್ದಂತಾಗಿದೆ ಗ್ರಾಮದ ನಿವಾಸಿ ಮಲ್ಲಮ್ಮ ಕನ ಗುಂಡ ಎಂಬುವರಿಗೆ ಸೇರಿದ ಇದು ಮನೆಯಾಗಿದೆ.ಹಳೆಯ ಮನೆ ಯಾಗಿರುವುದರಿಂದ ತೇವಾಂಶ ಹಿಡಿದು ಒಮ್ಮಿಂದೊಮ್ಮೆಲೆ ಮನೆ ಕುಸಿದು ಬಿದ್ದಿದೆ ಹಗಲಿನಲ್ಲಿ ಮನೆ ಬಿದ್ದಿರುವ ಕಾರಣ ಎಲ್ಲರೂ ಹೊರಗಡೆ ಹೋಗಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಬಡತನದಲ್ಲಿ ಜೀವನ ನಡೆಸುತ್ತಿರುವ ಈ ಕುಟುಂಬದ ಮನೆ ಕುಸಿದು ಬಿದ್ದಿರುವುದರಿಂದ ಬದುಕು ಬೀದಿ ಪಾಲಾಗಿದೆ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿಲಾಯಿತು.ಕುಟುಂಬ ನಿರ್ವಹಣೆಗಾಗಿ ತಂದಿಟ್ಟ ದವಸ ಧಾನ್ಯ& ಕೆಲವೊಂದು ಪಾತ್ರೆಗಳು ಯಾಗೂ ಇನ್ನಿತರ ವಸ್ತುಗಳು ಮಣ್ಣುಪಾಲಾಗಿವೆ. ಅಲ್ಲದೆ ಬೆಲೆಬಾಳುವ ವಸ್ತುಗಳು ಕೆಲವು ಮನೆಯ ಅವಶೇಷಗಳಡಿ ಸಿಲುಕಿ ಹಾನಿಯಾಗಿವೆ.ಮನೆ ಕಳೆದುಕೊಂಡವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲಿಕಾರ್ಜುನ್ ಕೊಬ್ರಿ ಒತ್ತಾಯಿಸಿದ್ದಾರೆ.

ವರದಿ- ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ..

Please follow and like us:

Related posts

Leave a Comment