30 ವರ್ಷಗಳಿಂದ ಆ ಗ್ರಾಮದಲ್ಲಿ ಗಣೇಶ ಹಬ್ಬ ಆಚರಣೆಯೇ ಇಲ್ಲ: ಗ್ರಾಮ ಯಾವುದು ಗೊತ್ತಾ?

ಚಿತ್ರುದರ್ಗ : ದೊಡ್ಡ ದೊಡ್ಡ ನಗರಗಳಿಂದ ಚಿಕ್ಕ ಹಳ್ಳಿಗಳ ವರೆಗೂ ಗಣೇಶ ಸಂಭ್ರಮ ಮುಗಿಲು ಮುಟ್ಟುತ್ತದೆ. ಆದರೆ ಕರ್ನಾನಾಟಕದ ಇಲ್ಲೊಂದು ಗ್ರಾಮದಲ್ಲಿ 30 ವರ್ಷಗಳಿಂದ ಗಣೇಶ ಹಬ್ಬವನ್ನೇ ಮಾಡಿಲ್ಲ ಎಂದರೆ ನೀವು ನಂಬಲೇ ಬೇಕಾದ ವಿಷಯ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಮಾತ್ರ ಗಣೇಶ ಆಚರಣೆ 30 ವರ್ಷಗಳಿಂದ ಸುಳಿವೇ ಇಲ್ಲ. ಆಂಧ್ರ ಪ್ರದೇಶದ ಗಡಿಯಂಚಿನಲ್ಲಿರುವ ಈ ಗ್ರಾಮದಲ್ಲಿ ಮಾರಮ್ಮ ದೇವಿಯ ಮಹಿಮೆ ಚಿರಪರಿಚಿತ. ಪ್ರತಿ ಭಾದ್ರಪದ ಮಾಸದ ಮೊದಲ ದಿನ ದೇವಿಯ ಅದ್ದೂರಿ ಉತ್ಸವ ನಡೆಯಲಿದೆ. ಆದ್ರೆ ವಿಗ್ನ ನಿವಾರಕನಿಗೆ ಮಾತ್ರ ಅವಕಾಶವಿಲ್ಲ. ಕಾರಣ ದೇವಿಯ ಉತ್ಸವದ ವೇಳೆ ಬೇರೆ ಯಾವುದೇ ಆಚರಣೆ ಮಾಡುವಂತಿಲ್ಲ ಅನ್ನುವುದು ನಂಬಿಕೆ.ಇನ್ನು ಯಾರಾದರೂ ಬೇರೆ ಆಚರಣೆ ಮಾಡಲು ಮುಂದಾದರೆ ಕೆಡಕು ಉಂಟಾಗುತ್ತೆ ಅನ್ನುವ ಪ್ರತೀತಿ ಇದೆ. ಅಲ್ಲದೆ 30 ವರ್ಷಗಳ ಹಿಂದೆ ಗ್ರಾಮದಲ್ಲಿ ಗಣೇಶ ಉತ್ಸವ ಆಚರಣೆ ಮಾಡಿದ್ದರು. ಇದರಿಂದ ಗ್ರಾಮಸ್ಥರು ಹಲವು ಸಂಕಟಗಳನ್ನಎದುರಿಸಬೇಕಾಗಿತ್ತು. ಇದರಿಂದ ಈ ಗ್ರಾಮದಲ್ಲಿ ಗಣೇಶ ಹಬ್ಬ ಆಚರಣೆ ಕಳೆದ 30 ವರ್ಷಗಳಿಂದ ಬಂದ್ ಆಗಿದ್ದು, ಮಾರಮ್ಮ ಜಾತ್ರೆ ಮಾತ್ರ ಇಲ್ಲಿನ ಜನರು ನೆರವೇರಿಸುತ್ತಾ ಬಂದಿದ್ದಾರೆ.

ವರದಿ- ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ‌ ಬೆಂಗಳೂರು

Please follow and like us:

Related posts

Leave a Comment