ಸಿನಿಮಾ,ಧಾರವಾಹಿ ಚಿತ್ರೀಕರಣ ಪುನಾರಂಭಿಸಲು ಗ್ರೀನ್ ಸಿಗ್ನಲ್..!

ನವದೆಹಲಿ :ಮಹಾಮಾರಿ ಕೊರೊನಾ ಸೋಂಕಿನಿಂದ ಸ್ಥಗಿತಗೊಂಡಿದ್ದ ಸಿನಿಮಾ ಹಾಗು ಧಾರವಾಹಿ ಚಿತ್ರೀಕರಣವನ್ನು ಮತ್ತೆ ಪುನಾರಂಭಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.ಮಾರ್ಗಸೂಚಿಗಳನ್ನು ಪಾಲಿಸಿ ಸಿನಿಮಾ ಹಾಗು ಧಾರವಾಹಿಗಳನ್ನು ಚಿತ್ರೀಕರಣ ಆರಂಭಿಸಬಹುದು ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಇನ್ನೂ ಚಿತ್ರಿಕರಣ ಸಮಯದಲ್ಲಿ ಕೊರೊನಾ ನಿಯಮಾವಳಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.ನಟ-ನಟಿಯರನ್ನು ಹೊರತುಪಡಿಸಿ ಉಳಿದವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಚಿತ್ರೀಕರಣದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರಿಕರಣ ಮಾಡಬೇಕು,ಕಳೆದ ಮಾರ್ಚ್ ತಿಂಗಳಲ್ಲಿ ಕೊರೊನಾದಿಂದಾಗಿ ಚಿತ್ರೀಕರಣ ಸ್ಥಗಿತವಾಗಿತ್ತು.ಇದೀಗ ಕೋವಿಡ್ ಮಾರ್ಗಸೂಚಿಗಳೊಂದಿಗೆ ಚಿತ್ರಿಕರಣ ಪುನಾರಂಭಿಸುವುದರಿಂದ ಸಂಕಷ್ಟದಲ್ಲಿರುವವರಿಗೆ ಉದ್ಯೋಗಗಳು ಕೂಡ ಸೃಷ್ಟಿಯಾಗಲಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment