ದಾಖಲೆ ಸೃಷ್ಟಿಸಿದ ಜೋಗ್ .. ಒಂದೇ ದಿನದಲ್ಲಿ ಲಕ್ಷಗಟ್ಟಲೇ ಶುಲ್ಕ ಸಂಗ್ರಹ..!

ಶಿವಮೊಗ್ಗ:ಕೊರೊನಾದಿಂದ ಇಡೀ ದೇಶವೇ ಲಾಕ್ ಡೌನ್ ಎಂಬಾ ಹೆಸರಿನಲ್ಲಿ ಲಾಕ್ ಆಗಿತ್ತು. ಮಾಲ್,ಥೀಯೇಟರ್ ಅಷ್ಟೇ ಅಲ್ಲದೇ ಪ್ರವಾಸಿ ತಾಣಗಳು ಕೂಡ ಬಂದ್ ಆಗಿ ಹೋಗಿದ್ದವು.ಕೋರೊನಾದಿಂದ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿರುವ ನಮ್ಮ ಕರ್ನಾಟಕದಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿದ್ದು ಕೆಲದಿನಗಳಿಂದ ಪ್ರವಾಸಿ ತಾಣಗಳ ತೆರವಿಗೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.ಇದರ ಬೆನ್ನಲ್ಲೇ ಲಾಕ್ ಡೌನ್ ನಿಂದಾಗಿ ಬೇಸತ್ತಿದ್ದ ಜನರಿಗೆ ಸ್ವಲ್ಪಮಟ್ಟಿಗೆ ರೀಲಿಫ್ ಸಿಕ್ಕಂತಾಗಿದೆ. ತಾವೂ ಇಷ್ಟ ಪಡುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಮೈಗೂಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಪ್ರವಾಸಿ ತಾಣಗಳನ್ನು ಬಂದ್ ಮಾಡಿದ್ದರಿಂದ ಸರ್ಕಾರಕ್ಕೆ ತಕ್ಕ ಮಟ್ಟಿಗೆ ಆರ್ಥಿಕ ಹೊಡೆತ ಬಿದ್ದಿತ್ತು. ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ಜೋಗ್ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕೊರೊನಾ ಭೀತಿ ನಡುವೆಯೂ ಜೋಗದ ಸೌಂದರ್ಯ ನೋಡಲು ಜನರು ದಂಡು ದಂಡಾಗಿ ಆಗಮಿಸುತ್ತಿದ್ದಾರೆ.ನಿನ್ನೆ ಒಂದೇ ದಿನ ಸುಮಾರು 12,918 ಜನರು ಜೋಗ್ ಗೆ ಭೇಟಿ ನೀಡಿದ್ದು, ಪ್ರಧಾನ ಪ್ರವೇಶ ದ್ವಾರದಲ್ಲಿ 2 ಲಕ್ಷಕ್ಕೂ ಹೆಚ್ಚು ಪ್ರವೇಶ ಶುಲ್ಕ ಸಂಗ್ರಹವಾಗಿರುವುದು ಹೊಸ ದಾಖಲೆ ಸೃಷ್ಟಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment