ನಕಲಿ ಬೀಜದ ಗೊಬ್ಬರ ಹಾವಳಿಗೆ ಕಂಗಾಲಾದ ರೈತರು..!

ಶಹಾಪುರ : ತಾಲೂಕಿನಾದ್ಯಂತ ನಕಲಿ ಬೀಜ ಗೊಬ್ಬರ ಹಾವಳಿಗೆ ರೈತರು ಕಂಗಾಲಾಗಿ ಹೋಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಮಹೇಶಗೌಡ ಸುಬೇದಾರ ಮನವಿ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದ ರೈತರು ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ಜೀವನ ಅತಂತ್ರದಲ್ಲಿರುವ ಸಂದರ್ಭದಲ್ಲಿ ನಕಲಿ ಬೀಜ ಗೊಬ್ಬರ ಮಾರಾಟ ಮಾಡಿ ಮುಗ್ಧ ರೈತರಿಗೆ ಮೋಸ ಮಾಡಲಾಗುತ್ತಿದೆ.ಕೆಲವೊಂದು ಮಿಕ್ಸಾರ ಹಾಗೂ ಇನ್ನಿತರ ಕಂಪನಿಗಳ ಬೀಜ ಮತ್ತು ಗೊಬ್ಬರಗಳು ನಕಲಿಯಾಗಿರುವುದರಿಂದ ಕೂಡಲೇ ರದ್ದುಗೊಳಿಸಿ ಮಾರಾಟ ಮಾಡುವುದಕ್ಕೆ ನಿಷೇಧಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತ ಈಗಾಗಲೇ ಕೋರೋನಾ ಹಾಗೂ ಅತಿವೃಷ್ಟಿಯ ಸಂಕಷ್ಟದಲ್ಲಿರುವಾಗಲೇ ತಾಲೂಕಿನಾದ್ಯಂತ ನಕಲಿ ಬಿತ್ತನೆ ಬೀಜಗಳ ಮಾರಾಟ ಜಾಲಾ ಸಕ್ರಿಯವಾಗಿರುವುದರಿಂದ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ವರದಿ-ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment