ಜಿಲ್ಲಾ ಬಿಜೆಪಿ ಆಧ್ಯಕ್ಷನ ಅತಿರೇಕ ವರ್ತನೆಗೆ ಸಾರ್ವಜನಿಕರ ಆಕ್ರೋಶ..!

ಕೋಲಾರ: ಚಿಕಿತ್ಸೆಗೆಂದು ಬಂದ ಸಾರ್ವಜನಿಕರ ಮೇಲೆ ವೃತ್ತಿಯಲ್ಲಿ ವೈದ್ಯರಾಗಿರುವ ಬಿಜೆಪಿ ಆಧ್ಯಕ್ಷ ಡಾ.ವೇಣುಗೋಪಾಲ್ ಅತಿರೇಕ ವರ್ತನೆ ತೋರಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಖಾಸಗಿ ಪವನ್ ಆಸ್ಪತ್ರೆಯಲ್ಲಿ ನಡೆದಿದೆ. ಸ್ವತಃ ವೈದ್ಯರಾಗಿರುವ ಜಿಲ್ಲಾ ಬಿಜೆಪಿ ಆಧ್ಯಕ್ಷ ವೇಣುಗೋಪಾಲ್ ಚಿಕಿತ್ಸೆಗೆಂದು ಬಂದ ಸಾರ್ವಜನಿಕರಿಗೆ ಆವಾಜ್ ಹಾಕಿದ್ದಾರೆ. ಬಾಲಕನೊಬ್ಬನಿಗೆ ಕಿವಿಯಲ್ಲಿ ಕಲ್ಲು ಸಿಕ್ಕಿಕೊಂಡು ನೋವಿನಿಂದ ನರಳಾಡುತ್ತಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆ ತಂದಾಗ ಚಿಕಿತ್ಸೆ ನೀಡದೆ ಡಾ.ವೇಣುಗೋಪಾಲ್ ನಿರ್ಲಕ್ಷ್ಯ ತೋರಿದ್ದಾರೆ. ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಾಲಕನಿಗೆ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಬಾಲಕನ ಪೋಷಕರು ಈ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಇದೀಗ ಪುಲ್ ವೈರಲ್ ಆಗಿದೆ. ಖಾಸಗಿ ಆಸ್ಪತ್ರೆಗೆ ಯಾಕೆ ಬಂದ್ರಿ, ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂದು ಅವಾಜ್ ಹಾಕಿ ದರ್ಪ ತೋರಿದ್ದಾರೆ. ಒಂದು ಪಕ್ಷದ ಜಿಲ್ಲಾಧ್ಯಕ್ಷರಾಗಿ ಜನರ ಸಮಸ್ಯೆಗೆ ಸ್ಪಂಧಿಸಬೇಕಾದ ವೈದ್ಯನ ನಡುವಳಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ಯಪಡಿಸುತ್ತಿದ್ದಾರೆ

Please follow and like us:

Related posts

Leave a Comment