ಕನ್ನಡದ ಲವ್ ಮಾಕ್ಟೇಲ್ ಚಿತ್ರ ತೆಲುಗಿಗೆ ರಿಮೇಕ್..!

ಬೆಂಗಳೂರು :ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಯಶಸ್ವಿ ಕಂಡ ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್’ ಇದೀಗ ತೆಲುಗು ಭಾಷೆಗೆ ರಿಮೇಕ್ ಆಗುತ್ತಿದ್ದು,ಇದೀಗ ತೆಲುಗು ಭಾಷೆಯಲ್ಲಿ ಟೈಟಲ್ ಫಿಕ್ಸ್ ಮಾಡಲಾಗಿದೆ. ತಮನ್ನಾ ಭಾಟಿಯಾ ಹಾಗು ಸತ್ಯದೆವ್ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಚಿತ್ರಕ್ಕೆ ‘ಗುರ್ತುಂದಾ ಶೀತಕಾಲಂ’ ಎಂಬ ಟೈಟಲ್ ಇಡಲಾಗಿದೆ. ನಾಗಶೇಖರ್ ಮೂವೀಸ್ ಬ್ಯಾನರ್ ಅಡಿ ನಾಗಶೇಖರ್ ನಿರ್ದೇಶಿಸುತ್ತಿದ್ದು ಭಾವನಾ ರವಿ ನಿರ್ಮಿಸುತ್ತಿದ್ದಾರೆ. ಚಿತ್ರೀಕರಣ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಶೀಘ್ರವೇ ಸಿನಿಮಾ ಸೆಟ್ ಏರಲಿದೆ. ಒಟ್ನಲ್ಲಿ ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದ ಲವ್ ಮಾಕ್ಟೇಲ್ ತೆಲುಗಿನಲ್ಲಿ ಯಾವ ರೀತಿ ಅಬ್ಬರಿಸುತ್ತೆ ಎನ್ನುವುದು ಕಾದು ನೋಡಬೇಕಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment