ಕೊರೊನಾ ಭೀತಿ ಹಿನ್ನೆಲೆಯಲ್ಲೂ ದೇವರ ಜಲಧಿ ಕಾರ್ಯಕ್ರಮ ಮಾಡಿದ ಗ್ರಾಮಸ್ಥರು..!

ಶಿರಾ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಶಿರಾ ತಾಲ್ಲೂಕಿನ ಗಿಡುಗನಹಳ್ಳಿಯ ಪ್ರಸಿದ್ಧ ರಂಗನಾಥ ಸ್ವಾಮಿ ದೇವರ ಜಲಧಿ ಕಾರ್ಯಕ್ರಮವನ್ನು ಹೊರಗಿನ ಭಕ್ತರಿಗೆ ಆಹ್ವಾನ ನೀಡದೆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಗ್ರಾಮಸ್ಥರೇ ಸೇರಿಕೊಂಡು ಜಲಧಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ಯಾವುದೇ ಅದ್ಧೂರಿ ಮೆರವಣಿಗೆ ಇಲ್ಲದೆ, ದೇವಸ್ಥಾನದಿಂದ ಜಲಧಿ ಬಾವಿ ಬಳಿಗೆ ದೇವತಾ ಮೂರ್ತಿಯನ್ನು ಕರೆತಂದು ವಿಶೇಷ ಪೂಜಾ ಕೈಂಕರ್ಯಗಳನ್ನು ಮುಗಿಸಿ, ದೇಗುಲಕ್ಕೆ ವಾಪಸ್ ಕರೆತರಲಾಯಿತು. ಇನ್ನು ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ಆರ್.ರಂಗನಾಥಪ್ಪ, ಚಂದ್ರೇಗೌಡ, ತಿಮ್ಮಣ್ಣ, ಜಿ.ಟಿ.ಶ್ರೀರಂಗಪ್ಪ, ಜಿ.ಎಂ. ಮಂಜುನಾಥ್, ಬಸವರಾಜು, ಅರ್ಚಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment