ಶಾಂತಿ ಸೌಹಾರ್ದತೆಯಿಂದ ಮೊಹರಂ ಆಚರಿಸಿ : ಸಿಪಿಐ ಚೆನ್ನಯ್ಯ ಹಿರೇಮಠ..!

ಶಹಾಪುರ : ನಮ್ಮ ಭಾರತ ದೇಶ ಜಾತ್ಯತೀತವಾಗಿದ್ದು ನಮ್ಮ ಸಂವಿಧಾನ ಎಲ್ಲ ಧರ್ಮಗಳನ್ನು ಸಮಾನ ರೀತಿ ಕಾಣುವಂತೆ ಸೂಚಿಸುತ್ತದೆ, ಆದ್ದರಿಂದ ಹಿಂದೂ,ಮುಸ್ಲಿಂ,ಕ್ರೈಸ್ತ, ಎಲ್ಲರೂ ಸೇರಿ ನಾನಾ ಧರ್ಮೀಯರು ಅನ್ಯ ಧರ್ಮದ ಆಚರಣೆಗಳನ್ನು ಗೌರವದಿಂದ ಕಾಣಬೇಕು ಎಂದು ಶಹಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಚೆನ್ನಯ್ಯ ಹಿರೇಮಠ ಹೇಳಿದರು. ತಾಲ್ಲೂಕಿನ ದೋರನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮೊಹರಂ ಹಬ್ಬದ ಅಂಗವಾಗಿ ಏರ್ಪಡಿಸಿರುವ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಯುವ ಮುಖಂಡ ನಿಜಗುಣ ಪೂಜಾರಿ ದೋರನಹಳ್ಳಿ ಮಾತನಾಡಿ ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಬೇಕು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಣಮಂತ ಕಸನ್, ಖಾಜೇಸಾಬ್ ಮಠ್, ಮಹಾದೇವಪ್ಪ ಹುಡೇದ್, ಶರಣು ದೋರನಹಳ್ಳಿ, ಅಲ್ಲಿಸಾಬ್ ಗೋಗಿ, ಗಫೂರ್ ಸಾಬ್ ಗೋಗಿ, ಮಾನಪ್ಪ ಹುಲಸೂರು, ಮಹಮ್ಮದ್ ಸಾಬ್ ಮಸಾಯಿ, ಚಂದ್ರಾಮ ಕೊಂಬಿನ್, ಬಾಸು ಅರ್ಜುಣಗಿ ಹಾಗೂ ಎಲ್ಲಾ ಧರ್ಮದ ಹಿರಿಯರು ಹಾಗೂ ಇತರರು ಉಪಸ್ಥಿತರಿದ್ದರು.

ವರದಿ-ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಸಿನ್ನೂರ

Please follow and like us:

Related posts

Leave a Comment