ನನಗೆ ನನ್ನ ಹೆಂಡತಿ ಬೇಕು.. ಮಂಡ್ಯ ಎಸ್ಪಿ ಮೊರೆ ಹೊದ ಪತಿ..!

ಮಳವಳ್ಳಿ: ನಿಮ್ಮ ಇಲಾಖೆಯ ಪೊಲೀಸ್ ಪೇದೆಯೊಬ್ಬ ತನ್ನ ಪತ್ನಿಯನ್ನು ಅಪಹರಿಸಿದ್ದಾನೆ. ಆತನಿಂದಾಗಿ ತನ್ನ ಸಂಸಾರ ಬೀದಿಗೆ ಬಂದಿದೆ. ದಯಮಾಡಿ ನನಗೆ ನ್ಯಾಯಕೊಡಿಸಿ ಎಂದು ಮಂಡ್ಯ ಪೊಲೀಸ್ ಇಲಾಖೆಗೆ ಚಾಮರಾಜನಗರ ಜಿಲ್ಲೆಯ ನಾಗರಾಜಪ್ಪ ಅನ್ನುವ ವ್ಯಕ್ತಿಯೊರ್ವ ಮಂಡ್ಯ ಜಿಲ್ಲೆಯ ಎಸ್ಪಿಗೆ ದೂರು ನೀಡಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದಲ್ಲಿ ಇಂತಹದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ನಾಗರಾಜಪ್ಪ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ನಿವಾಸಿ. ಕೊಳ್ಳೇಗಾಲ ಪಟ್ಟಣದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಆದ್ರೆ ಅದೇನಾಯ್ತೋ ಏನೋ ಈತನ ಹೆಂಡತಿ ಶಿಲ್ಪಾಳನ್ನು ಮಂಡ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿರೋ ಹರೀಶ್ ಎಂಬಾತ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಇದ್ದರಿಂದ ಕಂಗಾಲಾದ ಪತಿ ಕೊಳ್ಳೆಗಾಲ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದು,ನನ್ನ ಹೆಂಡತಿ ನನಗೆ ಬೇಕು ದಯಮಾಡಿ ನನ್ನ ಹೆಂಡತಿಯನ್ನು ಹುಡುಕಿಸಿಕೊಡಿ ಆತನಿಂದಾಗಿ ನಾನು ನನ್ನ ಮಕ್ಕಳಿಬ್ಬರು ಬೀದಿ ಪಾಲಾಗಿದ್ದೇವೆ ಎಂದು ಪೇದೆ ವಿರುದ್ದ ದೂರು ನೀಡಲು ಹೋದರೆ ಅಲ್ಲಿನ ಪೊಲೀಸರು ದೂರು ಸ್ಚೀಕರಿಸುತ್ತಿಲ್ಲವಂತೆ. ಪೇದೆ ಜೊತೆ ಹೋಗಿರುವ ಆಕೆ ಬಂದು ದೂರು ನೀಡಲಿ ನೀನು ಹೋಗು ಅಂತಾ ದಬಾಯಿಸಿ ಕಳಿಸಿದ್ದಾರಂತೆ. ಇದ್ರಿಂದ ಕಂಗಾಲಾಗಿರೋ ವ್ಯಕ್ತಿ ಮಂಡ್ಯ ಎಸ್ಪಿಗೆ ದೂರು ನೀಡಿದ್ದಾನೆ. ಪತ್ನಿ ಕರೆದೊಯ್ದಿರೋ ಪೇದೆ ಹರೀಶ್ ತನ್ನ ಹೆಂಡತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ತನ್ನ ಈ ಸಂಬಂಧವನ್ನು ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡಿಸಿ ಬ್ಲಾಕ್ ಮೇಲ್ ಮಾಡ್ತಿದ್ದು, ನನಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾನೆ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹೆಂಡತಿಯನ್ನು ಆತನ ಸೆರೆಯಿಂದ ಬಿಡಿಸಿಕೊಡಿ ಮತ್ತು ಬೆದರಿಕೆ ಹಾಕಿರುವ ಪೇದೆಗೆ ಶಿಕ್ಷೆ ಕೊಡಿಸಿ ನನಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡ್ತಿದ್ದಾನೆ. ಇದಲ್ಲದೆ ಈತನ ಬೆಂಬಲಕ್ಕೆ ನಾಗರಾಜಪ್ಪನಿಗೆ ಹೆಂಡತಿಯ ತಂದೆಯ ನಿಂತಿದ್ದಾರೆ. ಒಟ್ಟಾರೆ ತನ್ನ ಹೆಂಡತಿ ಕರೆದೊಯ್ದಿರುವ ಪೊಲೀಸ್ ಪೇದೆಯ ವಿರುದ್ದ ಸಂತ್ರಸ್ಥ ಪತಿ ಇದೀಗ ನ್ಯಾಯಕ್ಕಾಗಿ ಮಂಡ್ಯ ಎಸ್ಪಿಯ ಮೊರೆ ಹೋಗಿದ್ದಾನೆ.ಈಗಲಾದ್ರು ಈ ವ್ಯಕ್ತಿಗೆ ಎಸ್ಪಿ ನ್ಯಾಯ ದೊರಕಿಸಿ ಕೊಡ್ತಾರಾ?ಇಲ್ಲ ತಮ್ಮ ಇಲಾಖೆ ಸಿಬ್ಬಂದಿಯನ್ನು ರಕ್ಷಣೆ ಮಾಡಿಕೊಳ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment