ಮಣಿಪಾಲ್ ಆಸ್ಪತ್ರೆಯಿಂದ ಮಾಧ್ಯಮದವರಿಗೆ ಮೀಡಿಯಾ ಹೆಲ್ತ್ ಕಾರ್ಡ್ ..!

ಬೆಂಗಳೂರು:ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಆರೋಗ್ಯ ಸಂಕಷ್ಟಕ್ಕೆ ಸಿಲುಕುತ್ತಿರುವುದು ನೋವಿನ ಸಂಗತಿಯಾಗಿದ್ದು ಇದಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಧ್ಯಮ ಆರೋಗ್ಯ ಕಾರ್ಡ್ ನೀಡಲು ಸಜ್ಜಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮಣಿಪಾಲ್ ಆಸ್ಪತ್ರೆ ಕಾರ್ಯನಿರತ ಪತ್ರಕರ್ತರಿಗಾಗಿ ಚಿಕಿತ್ಸಾ ಸೌಲಭ್ಯದಲ್ಲಿ ಶೇ.20 ರಷ್ಟು ರಿಯಾಯಿತಿ ನೀಡಲು ಒಪ್ಪಿದ್ದು, ಅದಕ್ಕಾಗಿ ನಮ್ಮ ವಿನಂತಿ ಮೇರೆಗೆ ಮಾಧ್ಯಮ ಆರೋಗ್ಯ ಕಾರ್ಡ್ (Media health card) ನೀಡಲು ಒಪ್ಪಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸುದ್ದಿವಾಣಿಗೆ ತಿಳಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿಯೂ ಈ ಕಾರ್ಡ್ ವಿತರಣಾ ಕಾರ್ಯಕ್ರಮ ಹಂತ ಹಂತವಾಗಿ ನಡೆಯಲಿದ್ದು ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಣಿಪಾಲ್ ಹಾಸ್ಪಿಟಲ್ ಸಂಸ್ಥೆಯ ಛೇರ್ಮನ್ ಡಾ.ಸುದರ್ಶನ್ ಬಲ್ಲಾಳ್ ಅವರು ಸಾಂಕೇತಿಕವಾಗಿ ಕೆಯುಡಬ್ಲ್ಯೂಜೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್ ಸೋಮಶೇಖರ್ ಗಾಂಧಿ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಇನ್ನೂ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಈ ವೇಳೆ ಮಾತನಾಡಿ ಕೊರೋನಾದಿಂದ ಮತ್ತು ಇತರೆ ಅನಾರೋಗ್ಯದ ಕಾರಣಗಳಿಂದ ಪತ್ರಕರ್ತರು ನಿಧನ ಹೊಂದಿರುವುದು ದುಃಖಕರ ಸಂಗತಿ. ಪತ್ರಕರ್ತರಿಗೆ ಆರೋಗ್ಯ ಬಹಳ ಮುಖ್ಯ.ಹಾಗಾಗಿ ಆರೋಗ್ಯ ಕಾರ್ಡ್ ತುಂಬಾ ಪ್ರಬಲ ಶಕ್ತಿಯಾಗಲಿದೆ ಎಂದರು. ಮೃತ ಪತ್ರಕರ್ತರಿಗೆ ಈಗಾಗಲೇ ಮುಖ್ಯಮಂತ್ರಿಗಳಿಂದ ಪರಿಹಾರ ನಿಧಿಯನ್ನು ನೀಡಲಾಗಿದ್ದು ಮುಂದೆ ಯಾವುದೇ ಇಂತಹ ಅನಾಹುತಗಳಾಗದಂತೆ ನಾವು ಎಚ್ಚರಿಕೆ ವಹಿಸಬೇಕೆಂದು ಸಲಹೆ ಹೇಳಿದರು.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment