ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆಯಲ್ಲಿ ನಾಗಮಂಗಲ ಪುರಸಭೆಗೆ ರಾಜ್ಯ ಮಟ್ಟದಲ್ಲಿ 5ನೇ ಸ್ಥಾನ.

ನಾಗಮಂಗಲ: ಕೇಂದ್ರ ಸರ್ಕಾರ ಘೋಷಿಸುವ 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆಯಲ್ಲಿ ನಾಗಮಂಗಲ ಪುರಸಭೆ ರಾಜ್ಯ ಮಟ್ಟದಲ್ಲಿ 5ನೇ ಸ್ಥಾನ ಹಾಗೂ ರಾಷ್ಟ್ರಮಟ್ಟದ ದಕ್ಷಿಣ ಭಾಗಗಳ ರಾಜ್ಯಗಳನ್ನೊಳಗೊಂಡಂತೆ ಘೋಷಿಸಿರುವ ಫಲಿತಾಂಶದಲ್ಲಿ 6ನೇ ಸ್ಥಾನವನ್ನು ತನ್ನದಾಗಿಸಿಗೊಂಡಿದೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ನೇತೃತ್ವದ ಅಧಿಕಾರಿಗಳು ನಿಂತಿದ್ದರು. ಪುರಸಭೆ ವ್ಯಾಪ್ತಿಯ 23 ವಾರ್ಡ್ಗರಳಲ್ಲಿಯೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಜೊತೆಗೆ, ಪಟ್ಟಣ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಬಿಸಾಡದಂತೆ ಪ್ರತಿನಿತ್ಯ ಅರಿವು ಮೂಡಿಸುವ ಕೆಲಸ ಮಾಡಿದ ಹಿನ್ನಲೆಯಲ್ಲಿ ಈ ಬಾರಿ ನಡೆದ ಸ್ವಚ್ಛ ಸರ್ವೇಕ್ಷಣ್ ಕಾರ್ಯಕ್ರಮದಲ್ಲಿ 5 ಮತ್ತು 6ನೇ ಸ್ಥಾನಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಕಳೆದ 2019ರಲ್ಲಿ ನಡೆಸಿದ್ದ ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆಯಲ್ಲಿ ಇಲ್ಲಿನ ಪುರಸಭೆಗೆ ರಾಜ್ಯಮಟ್ಟದಲ್ಲಿ 46ನೇ ಸ್ಥಾನ ಹಾಗೂ ರಾಷ್ಟ್ರಮಟ್ಟದ ದಕ್ಷಿಣ ಭಾಗಗಳ ರಾಜ್ಯಗಳ ಪೈಕಿ 217ನೇ ಸ್ಥಾನ ಲಭಿಸಿತ್ತು. ಈ ಬಾರಿ ಉತ್ತಮ ಫಲಿತಾಂಶದ ಗುರಿಯೊಂದಿಗೆ ಅಧಿಕಾರಿಗಳು ಎಲ್ಲ ರೀತಿಯಲ್ಲಿಯೂ ಸಜ್ಜುಗೊಂಡು ಅಗತ್ಯ ಕ್ರಮವಹಿಸಿದರೂ ಸಹ ಕೇವಲ ಕನಿಷ್ಠ ಅಂಕಗಳ ಅಂತರದಲ್ಲಿ ಅವಾರ್ಡ್ ಕೈತಪ್ಪಿ ಹೋಗಿದೆ. ಲಭಿಸಿರುವ ರಾಜ್ಯ ಮಟ್ಟದಲ್ಲಿ 5ನೇ ಸ್ಥಾನ ಹಾಗೂ ರಾಷ್ಟ್ರಮಟ್ಟದ ದಕ್ಷಿಣ ಭಾಗಗಳ ರಾಜ್ಯಗಳಲ್ಲಿ 6ನೇ ಸ್ಥಾನಕ್ಕೇರಿರುವುದು ಸ್ಥಳೀಯ ನಾಗರೀಕರಲ್ಲಿ ನಿರಾಳ ತಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿಯಾಗದಂತೆ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್ಗಿಳಲ್ಲಿಯೂ ಉತ್ತಮ ಪರಿಸರ ಸೃಷ್ಟಿಸಬೇಕೆಂಬುದೇ ನಮ್ಮ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಸ್ವಚ್ಛ ಸರ್ವೇಕ್ಷಣ್ ಸೇರಿದಂತೆ ಸರ್ಕಾರಗಳ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಿದರೆ ಮುಂದಿನ ಬಾರಿ ನಡೆಯುವ ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂಬ ವಿಶ್ವಾಸವಿದೆ ಎಂದರು.

ವರದಿ-ಎಸ್.ವೆಂಕಟೇಶ್ ಎಕ್ಸ್‌ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment