ಸರ್ಕಾರೇತರ ಸ್ವಯಂ ಸೇವಾ ಸಂಘದಿಂದ ಕಾರ್ಮಿಕರ ಹೆಸರಲ್ಲಿ ಮಾಲೀಕರ ಶೋಷಣೆ..!.

ನಾಗಮಂಗಲ:ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ನಿಯಮಬಾಹಿರ ಕಾರಣಗಳ ನೆಪದ ನೆರಳಲ್ಲಿ ಹಣ ಮಾಡುವ ದಂಧೆ ಹೇರಳವಾಗುತ್ತಿವೆ. ಇದೇ ನಿಟ್ಟಿನಲ್ಲಿ ಶಾಂತ ಜೀವನ ಜ್ಯೋತಿ ಸ್ವಯಂ ಸೇವಾ ಸಂಘದ ಜಾಲದಲ್ಲಿ ಬಲಿಪಶುವಾಗಿರುವ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ನ ಶೇಖರ್ , ಚಿಕನ್ ಸೆಂಟರ್ ಮಾಲೀಕ ಚಂದ್ರಶೇಖರ್,ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರದಿಂದ ಜೀತ ವಿಮುಕ್ತಿ ಪ್ರಮಾಣ ಪತ್ರ ಕೊಡಿಸುವ ಮೂಲಕ, ಸರ್ಕಾರಿ ಕೆಲಸ, ಸರ್ಕಾರಿ ಜಮೀನು, ನಿವೇಶನ ಸಹಿತ ಮನೆ ಕೊಡಿಸುವುದು ಸೇರಿದಂತೆ ಇಲ್ಲ-ಸಲ್ಲದ ಆಮೀಷ ಹೊಡ್ಡುವ ಮೂಲಕ ಅಮಾಯಕ ಮಾಲೀಕರನ್ನು ಗುರಿ ಮಾಡಲಾಗುತ್ತಿದೆ. ಇದೇ ದುರುದ್ದೇಶದಿಂದ ನನ್ನ ಜೀವನೋಪಾಯಕ್ಕಾಗಿ ತಾಲ್ಲೂಕಿನ ಬೆಳ್ಳೂರು ಕ್ರಾಸ್ ನಲ್ಲಿ ಕಳೆದ ಏಳೆಂಟು ವರ್ಷಗಳಿಂದಲೂ ನಡೆಸುತ್ತಿರುವ ಕೋಳಿ ವ್ಯಾಪಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜು ಎಂಬಾತ ಹೇಳಿಕೆ ಪಡೆದು ನನ್ನ ಮೇಲೆ ದೂರು ದಾಖಲಿಸಲಾಗಿದೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ನನ್ನಂತಹ ಅನೇಕ ಅನಕ್ಷರಸ್ಥರಿಗೆ ಕಾರ್ಮಿಕರ ನಿರ್ವಹಣೆಯ ನಿಯಮ ತಿಳಿದಿರದು. ಆದರೂ ಕಾರ್ಮಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನಮ್ಮಲ್ಲಿ ಅವರೊಬ್ಬರಂತೆ ಕಾಣುವ ಮೂಲಕ ಮಾನವೀಯತೆ ತೋರಿಸುತ್ತೇವೆ. ಆದರೂ ಇಂತಹ ಸ್ವಯಂ ಸೇವಾ ಸಂಘಗಳ ಹೆಸರಿನಲ್ಲಿ ಮಾಲೀಕರ ಶೋಷಣೆ ಅಮಾನವೀಯ. ಇಟ್ಟಿಗೆ ಫ್ಯಾಕ್ಟರಿ,ಬೇಕರಿ ಹಾಗೂ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಅದೇಷ್ಟೋ ಅಮಾಯಕ ಕಾರ್ಮಿಕರಿಗೆ ಇದೇ ರೀತಿ ಆಮೀಷ ಹೊಡ್ಡುವ ಮೂಲಕ ಹಣ ಮಾಡುವ ದಂಧೆಗೆ ಮುಂದಾಗಿರುವ ಈ ಸ್ವಯಂ ಸೇವಾ ಸಂಘದ ಸಂಸ್ಥೆಯ ವಿರುದ್ದ ಸೂಕ್ತ ತನಿಖೆಯಾಗಬೇಕಿದೆ. ಕಾರ್ಮಿಕರ ನಿರ್ವಹಣೆ ಬಗ್ಗೆ ಸೂಕ್ತ ತಿಳುವಳಿಕೆ ನೀಡುವ ಮೂಲಕ ಮಾಲೀಕರಿಗೆ ರಕ್ಷಣೆ ನೀಡಬೇಕಿದೆ ಎಂದರು.

ವರದಿ-ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment