ಮೊದಲ ಮಗು ನಿರೀಕ್ಷೆಯಲ್ಲಿ ಅನುಷ್ಕಾ-ವಿರಾಟ್ ದಂಪತಿ..!

ಮುಂಬೈ:ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೋಹ್ಲಿ ತಂದೆಯಾಗುವ ಸಂಭ್ರಮದಲ್ಲಿದ್ದಾರೆ. ನಾವಿಬ್ಬರು ಮೂವರಾಗುತ್ತಿದ್ದೇವೆ ಎಂದು ಸ್ವತಃ ವಿರಾಟ ಕೋಹ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅನುಷ್ಕಾ ಹಾಗು ವಿರಾಟ್ 2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಮೂರು ವರ್ಷಗಳ ನಂತರ ಈಗ ಮೊದಲ ಮಗುವನ್ನು ನೋಡಲು ಕಾತುರದಿಂದಿದ್ದಾರೆ.ಬರುವ ಜನವರಿ ಅಂದರೆ 2021 ರವೇಳೆಗೆ ನಮ್ಮ ಮನೆಗೆ ಪುಟ್ಟ ಕಂದಮ್ಮನ ಆಗಮನ ಆಗಲಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment