ನಟಿ ರಮ್ಯಾ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್..?

ಬೆಂಗಳೂರು: ಸ್ಯಾಂಡಲ್ ವುಡ್ ನ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಫೇಸ್ ಬುಕ್ ಖಾತೆಯನ್ನು ವಿದೇಶಿ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ ಸುದ್ದಿ ನಿನ್ನೆಯಿಂದ ಎಲ್ಲೇಡೆ ಹರಿದಾಡ್ತಾಯಿತ್ತು.ಇದರ ಬೆನ್ನಲ್ಲೇ ಈಗ ಸ್ಯಾಂಡಲ್ ವುಡ್ ನ ಮತ್ತೋರ್ವ ನಟಿಯ ಅಕೌಂಟ್ ಹ್ಯಾಕ್ ಆಗಿದೆ.ನಟಿ ಮತ್ತು ರಾಜಕಾರಣಿ ರಮ್ಯಾ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ ಎನ್ನಲಾಗುತ್ತಿದೆ. ಸೆಲೆಬ್ರಿಟಿಗಳಿಗೆ ಸಾಮಾಜಿಕ ಜಾಲತಾಣ ತಮ್ಮ ಪ್ರಚಾರಕ್ಕೆ ಸಿಗುವ ದೊಡ್ಡ ವೇದಿಕೆ.ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂಗಳಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಆದರೆ ಅವರ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಆಗಾಗ್ಗೆ ಕಿಡಿಗೇಡಿಗಳ ಕಣ್ಣು ಬೀಳುತ್ತೆ.ಖಾತೆಗಳನ್ನು ಹ್ಯಾಕ್ ಮಾಡಿ ಅಲ್ಲಿ ಅಸಭ್ಯ, ಚಿತ್ರ ವಿಚಿತ್ರ ಪೋಸ್ಟ್‌ಗಳನ್ನು ಹಾಕುತ್ತಾರೆ.ಸದಾ ಪೋಸ್ಟ್ ಗಳನ್ನು ಹಾಕುತ್ತಿದ್ದ ರಮ್ಯಾ ಅಕೌಂಟ್ ಮೇಲೆ ಹ್ಯಾಕರ್ಸ್ ಗಳ ಕಣ್ಣುಬಿದ್ದಿದೆ.ಇನ್ಸ್ಟಾಗ್ರಾಂನಲ್ಲಿ ದೋಷ ಕಾಣಿಸಿಕೊಂಡಿದೆ.ಕೆಲ ಪೋಟೊಗಳನ್ನು ಪೋಸ್ಟ್ ಮಾಡಲು ಪ್ರಯತ್ನಿಸಿದರು, ಆಗುತ್ತಿಲ್ಲ ಎಂದು ನಟಿ ರಮ್ಯ ದೂರಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Please follow and like us:

Related posts

Leave a Comment