ಸ್ಯಾಂಡಲ್ವುಡ್ ನಟ-ನಟಿಯರಿಗೆ ಕಂಟಕವಾದ ಡ್ರಗ್ಸ್ ಮಾಫಿಯಾ!

ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾಫಿಯಾಗೇನು ಕಮ್ಮಿ ಇಲ್ಲ. ಆದರೆ ಇದೀಗ ಸ್ಯಾಂಡಲ್ವುಡ್ ನಟ, ನಟಿಯರಿಗೂ ಡ್ರಗ್ಸ್ ಕಂಟಕ ಎದುರಾಗಿದೆ.ಸಿಲಿಕಾನ್ ಸಿಟಿಯಲ್ಲಿ ಎನ್ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಅನಿಕಾ ಬಂಧಿಸಿ ವಿಚಾರಣೆ ನಡೆಸಿದಾಗ ಮೊಹಮ್ಮದ್ ಅನೂಪ್ ಹಾಗು ರಾಜೇಶ್ ದಂಧೆಯಲ್ಲಿ ಪಾಲುದಾರರು ಎಂಬ ಮಾಹಿತಿ ಬಹಿರಂಗವಾಗಿದೆ.ಮೂವರನ್ನ ವಿಚಾರಣೆಗೊಳಪಡಿಸಿದಾಗ ಸ್ಯಾಂಡಲ್ವುಡ್ ಖ್ಯಾತ ನಟ,ನಟಿಯರು,ಕಿರುತರೆ ಧಾರವಾಹಿ ನಟ,ನಟಿಯರು,ಸಂಗೀತ ನಿರ್ದೇಶಕರು ಸೇರಿದಂತೆ ಹಲವು ಗಣ್ಯರು ಗ್ರಾಹಕರಂತೆ ಬಂದು ಡ್ರಗ್ಸ್ ಖರೀದಿ ಮಾಡಿದ್ದಾರೆಂಬ ಸ್ಫೋಟಕ ಸತ್ಯವನ್ನು ಬಾಯ್ಬೀಟ್ಟಿದ್ದಾರೆ.ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವಂತ ಡ್ರಗ್ಸ್,ಮಾತ್ರೆಗಳನ್ನ ವಶಕ್ಕೆ ಪಡೆದಿದ್ದಾರೆ.ಇಡೀ ಪ್ರಕರಣಕ್ಕೆ ಪ್ರಮುಖ ಆರೋಪಿ ಅನಿಕಾ ಕಿಂಗ್‌ಪಿನ್ ಎಂದು ತಿಳಿದುಬಂದಿದ್ದು, ಮನೆಯಲ್ಲಿ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಸ್ತುಗಳನ್ನ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.ಸದ್ಯ ಅನಿಕಾಳನ್ನ ವಿಚಾರಣೆಗೆ ಒಳಪಡಿಸಲಾಗಿದ್ದು, ಮತಷ್ಟು ಸ್ಪೋಟಕ ಸುದ್ದಿಗಳು ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment