ತಾಲ್ಲೂಕು ಆಡಳಿತದಿಂದ ತಾರತಮ್ಯ- ರಾಜಕಾರಣಿಗಳಿಗೊಂದು ನ್ಯಾಯಾ, ಸಂಘಟನೆಗಳಿಗೊಂದು ನ್ಯಾಯಾ…!

ಸಿಂಧನೂರು: ಕೋವಿಡ್-೧೯ ನಿಯಂತ್ರಣ ಮಾಡುವ ದೃಷ್ಟಿಯಿಂದ ಸಾರ್ವಜನಿಕರು ಗುಂಪು ಗುಂಪಾಗಿ ಸೇರದಂತೆ. ಪ್ರತಿ ಒಬ್ಬರು ಮಾಸ್ಕ ಧರಿಸುವಂತೆ. ಮದುವೆ ಹಾಗೂ ಹೊಟೇಲ್ ಗಳಲ್ಲಿ ಇಂತಿಷ್ಟು ಜನತೆ ಮಾತ್ರ ಸೇರಬೇಕು ಎನ್ನುವುದು ಸೇರಿದಂತೆ ಅನೇಕ ನಿಯಮಗಳಿಗಳನ್ನು ಜಾರಿಗೆ ತರಲು ತಾಲ್ಲೂಕು ಆಡಳಿತ ಮುಂದಾಗಿದೆ. ಆದರೆ ಈ ನಿಯಮ ರಾಜಕಾರಣಿಗಳಿಗೇಕೆ ಇಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಪ್ರಪಂಚದಾದ್ಯಂತ ಕೊರೋನಾ ಅಟ್ಟಹಾಸದಿಂದ ಎಲ್ಲಾ ಕ್ರಿಯಾ ಯೋಜನೆಗೆಳು ಸ್ಥಬ್ದವಾಗಿದ್ದು. ಸಾರ್ವಜನಿಕರ ಜೀವನದಲ್ಲೂ ಸಾಕಾಷ್ಟು ಬದಲಾವಣೆಗಳು ಬಂದಿವೆ. ಇದೇ ನಿಟ್ಟಿನಲ್ಲಿ ಸಾರ್ವಜನಿವಾಗಿ ಯಾರೂ ಕೂಡ ಗುಂಪಾಗಿ ಸೇರುವಂತಿಲ್ಲ ಅದರಲ್ಲೂ ಯಾವುದೇ ರೀತಿಯ ಹೋರಾಟಗಳಿಗೂ ಜನ ಸೇರುವಂತಿಲ್ಲ ಎಂದು ಸಿಂಧನೂರು ತಾಲ್ಲೂಕು ಆಡಳಿತ ಆದೇಶ ಹೊರಡಿಸಿದೆ. ಆದರೆ ನಗರದಲ್ಲಿ ಮಾತ್ರ ಸಂಘ ಸಂಸ್ಥೆಗಳಿಗೆ ಹೊರಟ. ಪ್ರತಿಭಟನೆ ಮೆರವಣಿಗೆ ಮಾಡುವ ಪರವಾನಿಗೆ ಕೊಡುತ್ತಿಲ್ಲ. ಆದರೆ ಇಲ್ಲಿ ಕೇವಲ ವಿವಿಧ ಪಕ್ಷಗಳಿಗೆ ಮಾತ್ರ ಹೋರಾಟ ಮತ್ತು ಯಾವುದೇ ರೀತಿಯ ಸುರಕ್ಷತೆ ಇಲ್ಲದೇ ಗುಂಪು ಸೇರಲಿ ಅವಕಾಶ ಕೊಡುವ ಮೂಲಕ ಇಬ್ಬುಗೆಯ ನೀತಿಯನ್ನು ಅನುಸರಿಸುವುದು ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ.ಇನ್ನೂ ಸಂವಿಧಾನವು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಹೋರಾಟ ಮಾಡುವ ಹಕ್ಕನ್ನು ನೀಡಿದೆ ಆದರೆ ತಾಲ್ಲೂಕಿನಲ್ಲಿ ಮಾತ್ರ ವಿವಿಧ ರಾಜಕೀಯ ಪಕ್ಷಗಳಿಗೆ ಮಾತ್ರ ಪ್ರತಿಭಟನೆ ಮೆರವಣಿಗೆ ಪರವಾನಿಗೆ ನೀಡುತ್ತಿರುವುದು ಯಾಕೆ,? ಜೊತೆಗೆ ಇಲ್ಲಿ ಪ್ರಭಾವಿ ರಾಜಕಾರಣಿಗಳು ಪೋಲಿಸ್ ಅಧಿಕಾರಿಗಳಿಗೆ ಮಾಹಿತಿ ನೀಡದೆ, ಪರವಾನಿಗೆ ಪಡೆಯದೆ, ವಿವಿಧ ಇಲಾಖೆ ಅಧಿಕಾರಿಗಳ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವುದು ಸಮಾನ್ಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಎಲ್ಲರಿಗೂ ಒಂದೆ ಆದೇಶ ಪಾಲನೆಯಾಗುವಂತೆ ಕ್ತಮ ವಹಿಸಬೇಕು ಎಂದು ಅಸಮಧಾನ ವ್ಯಕ್ತಪಡಿಸಿದರು…

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment