ಕೊರೊನಾ ಸೋಂಕಿನಿಂದ ಗುಣಮುಖರಾದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಸನ್ಮಾನ..!

ಹುಬ್ಬಳ್ಳಿ- ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಕುದರಿ ಅವರಿಗೆ ಕೆಲದಿನಗಳ ಹಿಂದೆ ಕೊರೊನಾ ಸೋಂಕು ಧೃಡ ಪಟ್ಟಿತ್ತು. ಇದರ ಹಿನ್ನೆಲೆ ಚಿಕಿತ್ಸೆಗೆಂದು ಕೋವಿಡ್ ಆಸ್ಪತ್ರೆ ಸೇರಿದ್ದು ಈಗ ಕೊರೊನಾ ಸೊಂಕಿನಿಂದ ಮುಕ್ತರಾಗಿ ಕೆಲಸಕ್ಕೆ ಹಾಜರಾಗಿದ್ದಾರೆ. ಇನ್ನು ಇವರ ಸಿಬ್ಬಂದಿ ವರ್ಗದವರು ಸೇರಿ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಪ್ರಶಾಂತ್ ಕುದರಿಯವರಿಗೆ ಪಿ ಎಸ್ ಐ ಶರಣ ದೇಸಾಯಿಯವರು ಶಾಲು, ಹೂವಿನ ಮಾಲೆ ಹಾಕಿ ಸನ್ಮಾನಿಸಿದರು..

ವರದಿ-ರಾಜು ಮುದುಗಲ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment