ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೊಗೊಂಡ ಶಾಸಕ ವೀರಣ್ಣ ಚರಂತಿಮಠ..!

ಬಾಗಲಕೋಟೆ:ಶಾಸಕ ಡಾ ವೀರಣ್ಣ ಚರಂತಿಮಠ ಅವರು ಬಾಗಲಕೋಟೆಯ ನಗರಸಭೆಗೆ ದಿಢೀರ್ ಭೇಟಿ ನೀಡಿ ನಗರಸಭೆ ಕಟ್ಟಡವನ್ನು ಪರಿಶೀಲಿಸಿದ್ರು,ಕಟ್ಟಡದ ಅಸ್ವಚ್ಛತೆ ಕಂಡು ಆಯುಕ್ತರು ಮತ್ತು ಎಂಜಿನಿಯರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಮೊದಲು ಸ್ವಚ್ಛತೆಗೆ ಆಧ್ಯತೆ ನೀಡಿ, ನಗರಸಭೆಯ ಆವರಣ, ನಗರಸಭೆಯ ಸುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಇಡಲು ಗಮನಹರಿಸಿ,ಒಂದು ತಿಂಗಳ ಒಳಗಾಗಿ ಕಟ್ಟಡದ ಮೇಲ್ಬಾಗ ಸ್ವಚ್ಛತೆಯಿಂದ ಕೂಡಿರಬೇಕು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು.

ವರದಿ- ಎಕ್ಸ್ ಪ್ರೆಸ್ ನ್ಯೂಸ್ ಬಾಗಲಕೋಟೆ..

Please follow and like us:

Related posts

Leave a Comment