ಸ್ಮಶಾನ ಜಾಗ ಒತ್ತುವರಿ..ಮಠದ ಮುಂಬಾಗವೇ ಶವದ ಅಂತ್ಯ ಸಂಸ್ಕಾರ..!

ಮಳವಳ್ಳಿ:ಸ್ಮಶಾನ ಜಾಗದಲ್ಲಿ ಶವ ಸಂಸ್ಕಾರಕ್ಕೆ ಮಠದ ಸಂಬಂಧಿಯ ಅಡ್ಡಿಯ ಹಿನ್ನೆಲೆ ಬಿ.ಜಿ.ಪುರದ ಮಂಟೇಸ್ವಾಮಿ ಮಠದ ಮುಂದಿನ ಜಮೀನಿನಲ್ಲೇ .ಬಿ.ಜಿ.ಪುರ ಗ್ರಾಮದ ಮಾದಿಗ ಜನಾಂಗದವರಿಂದ ಶವ ಸಂಸ್ಕಾರವನ್ನು ಮಾಡಲಾಯಿತು.. ಮಾದಿಗ ಜನಾಂಗದವರ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಲ್ಲದೇ, ಶವ ಸಂಸ್ಕಾರಕ್ಕೆ ಮಠಾದೀಶನ ಸಂಬಂಧಿ ಅಡ್ಡಿ ಪಡಿಸಿದ್ದು, ಶವದ ಅಂತ್ಯಸಂಸ್ಕಾರದ ವಿವಾದದಿಂದ ಗ್ರಾಮದಲ್ಲಿ ಮಠದ ಹಾಗೂ ಜನರ ನಡುವೆ ವಾಗ್ವಾದ ಶುರುವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಲಿಸರು ಮತ್ತು ಅಧಿಕಾರಿಗಳ ಭೇಟಿ ನೀಡಿದ್ದು, ಸಂಧಾನ ಮಾಡುವಳ್ಳಿ ವಿಫಲರಾಗಿದ್ದಾರೆ.ಯಾರ ಮಾತು ಕೇಳದೆ ಜನ ಶವದ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment