6 ತಿಂಗಳಲ್ಲಿ 80 ಸಾವಿರ ಕಡತ..ನಾಗಮಂಗಲ ತಹಸೀಲ್ದಾರ್ ಕುಂಞ ಅಹಮ್ಮದ್..!

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಕೈಬರಹ ಪಹಣಿಯಿಂದ ಗಣಕೀಕೃತ ಪಹಣಿ ಆದಾಗಿನಿಂದ ಬಾಕಿ ಉಳಿದಿದ್ದ 1,35,314 ಕಡತಗಳ ಪೈಕಿ ಕಳೆದ 6 ತಿಂಗಳಲ್ಲಿ 80 ಸಾವಿರ ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ತಹಸೀಲ್ದಾರ್ ಕುಂಞ ಅಹಮ್ಮದ್ ರೈತಪರ ಕಾಳಜಿ ತೋರಿದ್ದಾರೆ. ರೈತರ ಪಹಣಿಗಳನ್ನು ಕೈ ಬರಹದಿಂದ ಗಣಕೀಕೃತಕ್ಕೆ ದಾಖಲಿಸುವಾಗ ಪಹಣಿಗಳಲ್ಲಿ ಉಂಟಾಗಿದ್ದ ಸಮಸ್ಯೆಗಳಾದ ಒಗ್ಗೂಡಿಸುವುದು ಹಾಗೂ 11 ಇ ನಕ್ಷೆ ಸೇರಿದಂತೆ ತಿದ್ದುಪಡಿಗಳಂತಹ ದೋಷಗಳಿಂದ ರೈತರು ಬೇಸತ್ತಿದ್ದರು.ಇಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಪ್ರತಿದಿನ ರಾಜಸ್ವ ನಿರೀಕ್ಷರು, ಗ್ರಾಮ ಲೆಕ್ಕಿಗರು ಹಾಗೂ ತಹಸೀಲ್ದಾರ್ ಕಚೇರಿಗೆ ಅಲೆಯುವುದೇ ರೈತರ ಕಾಯಕವಾಗಿತ್ತು.ಇದೇ ಜ.16 ರಂದು ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಕುಂಞ ಅಹಮ್ಮದ್, ಕೊರೊನಾ ಕರ್ತವ್ಯದ ನಡುವೆಯೂ ದಿನ ಪೂರ್ತಿ 03 ಪಾಳಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಸುಮಾರು 20 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಕೃಷಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಮೂಲಕ ರೈತಪರ ಆಡಳಿತಕ್ಕೆ ಒತ್ತು ನೀಡಿದ್ದಾರೆ.ಈ ಬಗ್ಗೆ ಎಕ್ಸ್ಪ್ರೆಸ್ ಟಿವಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ತಹಸೀಲ್ದಾರ್ ಕುಂಞ ಅಹಮ್ಮದ್, ದೇಶದ ಬೆನ್ನೆಲುಬಾಗಿರುವ ರೈತರ ರಕ್ಷಣೆಯೇ ನನ್ನ ಗುರಿಯಾಗಿದ್ದು, ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಮೂಲಕ ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ.ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ಸೂಚನೆಯ ಮೇರೆಗೆ 80 ಸಾವಿರ ಕಡತಗಳನ್ನು ವಿಲೆವಾರಿ ಮಾಡಿರುವದು ನನಗೆ ಆತ್ಮತೃಪ್ತಿ ತಂದಿದೆ.ಉಳಿದ ಕಡತಗಳನ್ನು ಶೀಘ್ರವೇ ನಿಯಮಾನುಸಾರ ಇತ್ಯರ್ಥ ಪಡಿಸಲಾಗುವುದು ಎಂದರು.

ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment