ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೆಜಿಎಫ್ ಭೇಟಿ..!

ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಪ್ ಚಿನ್ನದಗಣಿ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸುವ ಉದ್ದೇಶದ ಹಿನ್ನಲೆ ಇಂದು ಕೆಜಿಎಪ್ ಗೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಮೊದಲು ಕೆಜಿಎಫ್ ನಗರದ ಬೆಮೆಲ್ ಸಂಸ್ತೆಗೆ ಭೇಟಿ ನೀಡಿ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡು, ನಂತರ ಬೆಮೆಲ್ ಹಿಂಭಾಗದಲ್ಲೆ ಇರುವ ಮೈನ್ಸ್ ಪ್ರದೇಶದಲ್ಲಿನ ಭೂಮಿಯನ್ನ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ರು, ಈ ವೇಳೆ ಸಂಸದ ಎಸ್ ಮುನಿಸ್ವಾಮಿ, ಕೆಜಿಎಪ್ ಶಾಸಕಿ ರೂಪಕಲಾ, ಜಿಲ್ಲಾಧಿಕಾರಿ, ಎಸ್ಪಿ ಹಾಗು ಇಲಾಖೆ ಅಧಿಕಾರಿಗಳು ಹಾಜರಿದ್ದರು, ಚಿನ್ನದಗಣಿಗೆ ಸೇರಿದ 3200 ಎಕರೆ ಭೂಮಿಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು, ಬೆಂಗಳೂರು ಕೈಗಾರಿಕಾ ಸಂದಣಿಯ ಒತ್ತಡವನ್ನು ಕಡಿಮೆ ಮಾಡಲು ಕೆಜಿಎಫ್ ನಲ್ಲಿ ಕೈಗಾರಿಕಾ ವಲಯ ಸ್ತಾಪಿಸಲು ಸರ್ಕಾರ ಚಿಂತನೆ ನಡೆಸಿದೆ, ಆದರೆ ಚಿನ್ನದ ಗಣಿಯಲ್ಲಿ,ನೈಸರ್ಗಿಕ ಖನಿಜ ಲಭ್ಯವಿದ್ದರೆ ಕೈಗಾರಿಕೆ ಪಾರ್ಕ್ ಸ್ಥಾಪನೆ ಬಗ್ಗೆ ಅನ್ಯ ಚಿಂತನೆ ನಡೆಸುವ ಚಿಂತನೆಯನ್ನು ಇರಿಸಿಕೊಳ್ಳಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ,ಇನ್ನು ಸಚಿವರು ಇಂಡಸ್ಟ್ರಿಯಲ್ ಪಾರ್ಕ್ ಸ್ತಾಪಿಸಲು ವೀಕ್ಷಿಸಿದ ಸ್ತಳದ ಕುರಿತು ಕೆಜಿಎಪ್ ಶಾಸಕಿ ರೂಪಕಲಾ ಅವರು ಬಹಿರಂಗ ಬೇಸರ ವ್ಯಕ್ತಪಡಿಸಿದ್ದಾರೆ, ಸಚಿವರು ತೆರಳಿದ ನಂತರ ಮಾತನಾಡಿದ ಅವ್ರು ಬೆಮೆಲ್ ಕಂಪನಿಗೆ ಸರ್ಕಾರ ನೀಡಿದ್ದ ಭೂಮಿಯಲ್ಲಿ 973 ಎಕರೆ ಜಾಗದ ಲೀಸ್ ಅವಧಿ ಮುಗಿದಿದ್ದು, ಈಗ ರಾಜ್ಯ ಸರ್ಕಾರ ಅದನ್ನು ವಶಕ್ಕೆ ಪಡೆಯಬಹುದು, ಇನ್ನು ಸಚಿವರು ವೀಕ್ಷಣೆ ಮಾಡಿದ ಜಾಗಕ್ಕಿಂತ, ಮೈನಿಂಗ್ ಪ್ರದೇಶದಲ್ಲೆ ಉತ್ತಮ ಜಾಗವಿದೆ, ಈಗ ಪರಿಶೀಲನೆ ನಡೆಸಿದ ಸ್ತಳದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿ ಮಾಡುವುದು ಕಷ್ಟ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಕೋಲಾರ..!

Please follow and like us:

Related posts

Leave a Comment