ಜಮೀನಿನಲ್ಲಿ ವಾಲಿದ ಟ್ರಾನ್ಸ್ಫಾರ್ಮರ್ ಆತಂಕದಲ್ಲಿ ರೈತರು..1

ಶಹಾಪುರ : ಶಹಾಪುರ ತಾಲ್ಲೂಕಿನ ಕೊಳ್ಳೂರು ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ವಾಲಿರುವುದರಿಂದ ರೈತರು ಹಾಗೂ ಗ್ರಾಮಸ್ಥರು ಜೀವ ಕೈಯಲ್ಲಿಡಿದು ಆತಂಕದಲ್ಲಿ ಬದುಕುವಂತಾಗಿದೆ. ಸುಮಾರು ನಾಲ್ಕು ತಿಂಗಳಿಂದ ರೈತರು ಸಂಬಂಧಪಟ್ಟ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನದೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.ಈ ಜಮೀನಿನ ಹತ್ತಿರ ಕಂಬದ ಸುತ್ತಮುತ್ತಲ ಜನರು ಹೋಗುವುದಕ್ಕೇ ಹೆದರುತ್ತಿದ್ದಾರೆ ಯಾವ ಸಮಯದಲ್ಲಾದರೂ ಏನಾದರೂ ಅನಾಹುತ ಸಂಭವಿಸಬಹುದು ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ .ಸಾಕಷ್ಟು ಬಾರಿ ದುರಸ್ತಿಗೆ ಮನವಿ ಮಾಡಿಕೊಂಡರೂ ಪ್ರಯೋಜನೆಯಾಗಿಲ್ಲ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಯುವ ಮುಖಂಡರಾದ ಶಿವರೆಡ್ಡಿ ಪಾಟೀಲ್ ಕೊಳ್ಳೂರ ಅವರು ಆರೋಪಿಸಿದ್ದಾರೆ.

ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment