ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಘಟಕದ ಅಧ್ಯಕ್ಷ ರಾಘವೇಂದ್ರ ಯಕ್ಷಿಂತಿಗೆ ಸನ್ಮಾನ..!

ಶಹಾಪುರ :- ನೂತನವಾಗಿ ಆಯ್ಕೆಯಾದ ಯಾದಗಿರಿ ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗ್ರಾಮದ ರಾಘವೇಂದ್ರ ಯಕ್ಷಿಂತಿ ಅವರಿಗೆ ಇಂದು ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು.ನಾನು ಪಕ್ಷ ಸಂಘಟನೆಗಾಗಿ ಹೆಚ್ಚು ಒತ್ತುಕೊಟ್ಟು ತಳಮಟ್ಟದಿಂದ ಮತ್ತಷ್ಟು ಬಿಜೆಪಿ ಪಕ್ಷ ಬಲಿಷ್ಠ ಪಡಿಸುವಂತೆ ಕೆಲಸ ನಿಭಾಯಿಸುತ್ತೇನೆಂದು ಶಹಾಪುರದ ಜಡೆಪ್ಪನ ಮಠದಲ್ಲಿ ಹಮ್ಮಿಕೊಂಡಿರುವ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳನ್ನು ಮೆಚ್ಚಿ ಇಂದು ಹೆಚ್ಚೆಚ್ಚು ಯುವಕರು ಬಿಜೆಪಿಯತ್ತ ವಾಲುತ್ತಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸುರೇಶ್ ಸ್ವಾಮಿ,ಬಿಜೆಪಿ ಯುವ ಮುಖಂಡ ಕರಬಸಪ್ಪ ಬಿರಾಳ ಶಿರವಾಳ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಣ್ಣ ಹೊಸಮನಿ, ಅಂಬರೀಶ್ ಹೂಗಾರ,ಶಿವಪುತ್ರ ಪಾಟೀಲ್,ಹಾಗೂ ಇತರರು ಉಪಸ್ಥಿತರಿದ್ದರು..

ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಸಿನ್ನೂರ

Please follow and like us:

Related posts

Leave a Comment