ಜಮೀನಿನಲ್ಲಿ ಗಾಂಜಾ ಬೆಳೆ..ಅಧಿಕಾರಿಗಳಿಂದ ದಿಡೀರ್ ದಾಳಿ..ರೈತ ಎಸ್ಕೇಪ್..!

ಶಿರಾ: ಅಬಕಾರಿ ಮತ್ತು ಕಂದಾಯ ಇಲಾಖೆ ಜಂಟಿ ದಾಳಿ ನಡೆಸಿದ್ದು, ಸುಮಾರು 6.ಕೆಜಿ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಶಿರಾ ತಾಲೂಕಿನ ಬಂದಕುಂಟೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಸರ್ವೇ ನಂ95 ರಲ್ಲಿ ಸಿದ್ದಪ್ಪ ಎಂಬುವರು ಗಾಂಜಾ ಸೊಪ್ಪು ಬೆಳೆದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಸಬ್ ಇನ್ಸ್ಪೆಕ್ಟರ್ ರಶ್ಮಿ ಹಾಗೂ ಉಪತಹಶೀಲ್ದಾರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ 6 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿ ನಾಪತ್ತೆಯಾಗಿದ್ದು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಗೌಡಗೆರೆ ರಾಜಸ್ವ ನಿರೀಕ್ಷಕ ವೈ.ಬಿ ಕಾಂತಪ್ಪ ಗ್ರಾಮ ಲೆಕ್ಕಾಧಿಕಾರಿ ಉಮೇಶ್ ಸೇರಿದಂತೆ ಹಲವರು ಹಾಜರಿದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..

Please follow and like us:

Related posts

Leave a Comment