ಸಿಸಿಬಿ ಅಧಿಕಾರಿಗಳಿಂದ ಇಂದು ಇಂದ್ರಜಿತ್ ಲಂಕೇಶ್ ವಿಚಾರಣೆ..!

ಬೆಂಗಳೂರು : ಸ್ಯಾಂಡಲ್ವುಡ್ ಸ್ಟಾರ್ ನಟ,ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬ ಹೇಳಿಕೆ ಹಿನ್ನೆಲೆ ಇಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಯಲಿದೆ. ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ಹಾಜರಾಗಲು ಸಿಸಿಬಿ ಅಧಿಕಾರಿಗಳು ಸಮಯ ನಿಗದಿ ಪಡಿಸಿದ್ದು, ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಶನಿವಾರ ನೋಟಿಸ್ ನೀಡಿದ್ದರು. ಅದರಂತೆ ಇಂದು ಹಾಜರಾಗಿ ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಲಿದ್ದಾರೆ. ಸಿಸಿಬಿ, ಡಿಸಿಪಿ ರವಿ ನೇತೃತ್ವದಲ್ಲಿನ ತಂಡ ಈಗಾಗಲೇ ಕೆಲ ಪ್ರಶ್ನೆಗಳನ್ನು ತಯಾರಿ ಮಾಡಿ ಲಂಕೇಶ್ ಅವರಿಂದ ಮಾಹಿತಿ ಪಡೆಯಲಿದ್ದಾರೆ. ಇಂದ್ರಜಿತ್ ಹೇಳಿಕೆ ಆಧಾರದ ಮೇಲೆ ಸುಮೊಟೋ ಕೇಸ್ ದಾಖಲಿಸಿ ಮುಂದಿನ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಡ್ರಗ್ಸ್ ಪ್ರಕರಣದಲ್ಲಿ ಇಂದ್ರಜಿತ್ ಅವರನ್ನ ಸಾಕ್ಷಿಯನ್ನಾಗಿ ಪೊಲೀಸರು ಪರಿಗಣಿಸಿ ಇಂದ್ರಜಿತ್ ಅವರಿಂದ ದೂರು ಪಡೆದುಕೊಳ್ಳುವ ಸಾಧ್ಯತೆ ಕೂಡಯಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment