ಎಸ್ ಟಿ ಪತ್ರಕ್ಕಾಗಿ ಶಾಸಕ ಮನಗೂಳಿ ಮನೆಗೆ ಮುತ್ತಿಗೆ…

ಸಿಂಧಗಿ: ತಳವಾರ, ಪರಿವಾರ ಸಮುದಾಯಕ್ಕೆ ST ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ಶಾಸಕ ಎಂ.ಸಿ. ಮನಗೂಳಿ ಮನೆಗೆ ತಳವಾರ ಮತ್ತು ಪರಿವಾರ ಸಮಾಜದ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು..ತಳವಾರ ಮತ್ತು ಪರಿವಾರ ಎಸ್ಟಿ ಮೀಸಲು ಪತ್ರಕ್ಕೆ ಹೋರಾಟಕ್ಕೆ ಶಾಸಕ ಮನಗೂಳಿ ಬೆಂಬಲಿಸಬೇಕು, ಅಲ್ಲದೇ, ಸದನದಲ್ಲಿ ತಳವಾರ ಮತ್ತು ಪರಿವಾರಕ್ಕೆ ಎಸ್ ಟಿ ಪತ್ರ ನೀಡುವಂತೆ ಧ್ವನಿ ಎತ್ತುವಂತೆ ನಮ್ಮೊಂದಿಗೆ ಕೈ ಜೋಡಿಸಿ ನಮ್ಮ ಬೆಂಬಲಕ್ಕೆ ಸಹಕರಿಸುವಂತೆ ಆಗ್ರಹಿಸಿದರು..ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಸಿ.ಮನಗೂಳಿ, ನಿಮ್ಮ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ. ನಮ್ಮ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರ ಮುಖಾಂತ ಸರ್ಕಾರದ ಮೇಲೆ ಒತ್ತಾಯಿಸುವದಾಗಿ ಹೇಳಿದರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಸ್ ಟಿ ಜಾತಿ ಪ್ರಮಾಣ ಪತ್ರ ನೀಡದೇ ಹೋದ್ರೇ ಪ್ರಧಾನಿ ಮೋದಿ ಮನೆ ಎದುರು ಪ್ರತಿಭಟನೆ ಮಾಡಲಾಗುವುದು ಎಂದರು…

ವರದಿ- ಎಸ್.ಎಸ್ ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂಧಗಿ

Please follow and like us:

Related posts

Leave a Comment