ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ತಹಶಿಲ್ದಾರ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ…!

ಸಿಂಧನೂರು: ನಗರದ ತಹಶಿಲ್ದಾರ ಕಚೇರಿ ಮುಂದೆ ಹಿಂದು ಜಾಗರಣ ವೇದಿಕೆ ತಾಲ್ಲೂಕು ಸಮಿತಿ ವತಿಯಿಂದ ದೇವದುರ್ಗ ನಗರದಲ್ಲಿ ಶ್ರೀ ಗಣೇಶ ಪ್ರತಿಷ್ಠಾಪನೆಗೆ ಹಾಕಿದ್ದ ಭಕ್ತಿ ಗೀತೆಗಳ ಧ್ವನಿವರ್ಧಕವನ್ನು ತೆಗೆಸುವ ನೆಪದಲ್ಲಿ ತಹಶಿಲ್ದಾರ ಸಂತೋಷ ರಾಣಿಯವರ ದೌರ್ಜನ್ಯ ಖಂಡಿಸಿ ಪ್ರತಿಭಟನೆ ಮಾಡಿದರು.ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಿಂದು ಜಾಗರಣ ವೇದಿಕೆ ಮುಖಂಡ ಪ್ರಹ್ಲಾದ ಕೆಂಗಲ್ ಮಾತನಾಡಿ ಹಿಂದುಗಳ ದೊಡ್ಡ ಹಬ್ಬವಾದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸರ್ಕಾರವು ಪ್ರತಿ ವರ್ಷವೂ ತಡೆಯುಂಟು ಮಾಡುತ್ತಿದ್ದರು. ನಾವು ಅದನ್ನು ಸಹಿಸಿಕೊಂಡು ಹಿಂದೂ ಸಮಾಜ ಭಕ್ತಿಭಾವದಿಂದ ಶ್ರೀ ಗಣೇಶೋತ್ಸವವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು. ಆದರೆ ದೇವದುರ್ಗ ನಗರದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಸಂತೋಷ ರಾಣಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದ ಇವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು. ನಂತರ ಮನವಿ ಪತ್ರವನ್ನು ತಹಶಿಲ್ದಾರ ಮೂಲಕ ಮುಖ್ಯಮಂತ್ರಿ ಗಳಿಗೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ನಗರ ಸಭೆಯ ನಾಮ ನಿರ್ದೇಶನ ಸದಸ್ಯ ಪ್ರಶಾಂತ ಕಿಲ್ಲೇದ್ ,ಚನ್ನಬಸವ ದೇಸಾಯ, ಹನುಮಂತ ಹಟ್ಟಿ, ಸುಕುಮುನಿ ತುರುವಿಹಾಳ, ರವಿಕುಮಾರ್. ಚನ್ನರೆಡ್ಡಿ ಸುರೇಶ್ ಉಪ್ಪಳ, ಬಸವರಾಜ ಗೌಡನ ಬಾವಿ, ವೆಂಕಟೇಶ ಶೆಟ್ಟಿ, ಅಮರೇಶ್, ರುದ್ರೇಶ ಹಿರೇಮಠ, ಹನುಮೇಶ ವಾಲೇಬಾರ್ ಸೇರಿದಂತೆ ಅನೇಕರು ಭಾಗವಹಿಸಿದರು.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment