ಕೊರೊನಾ ವಾರಿಯಾರ್ಸ್ ಗೆ ಮಿಷನ್ ವತಿಯಿಂದ ಆಹಾರ ವಿತರಣೆ..!

ಮಳವಳ್ಳಿ: ಕೋವಿಡ್ 19 ಸೋಂಕಿತರಿಗೆ ಹಾಗೂ ಕೊರೊನಾ ವಾರಿಯಸ್೯ಯಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಜಿಲ್ಲಾ ಮಾನವ ಹಕ್ಕುಗಳ ಮಿಷನ್ ವತಿಯಿಂದ ಸುಮಾರು 150 ಮಂದಿಗೆ ಮಧ್ಯಾಹ್ನ ಊಟವನ್ನು ಮಳವಳ್ಳಿಯಲ್ಲಿ ವಿತರಿಸಲಾಯಿತು.ಮಳವಳ್ಳಿ ಪಟ್ಟಣದ ಕೆ ಎಸ್ ಆರ್ ಟಿ ಸಿ ಚಾಲಕರ ತರಬೇತಿ ಕೇಂದ್ರ ,ಸಾರ್ವಜನಿಕ ಆಸ್ವತ್ರೆಯ ವೈದ್ಯರು ಹಾಗೂ ತಾಲ್ಲೂಕಿನ ವಡ್ಡರಹಳ್ಳಿ ವಸತಿ ನಿಲಯದಲ್ಲಿರುವ ಕೋರೋನಾ ಸೋಂಕಿತರಿಗೆ ಮಂಡ್ಯ ಜಿಲ್ಲಾ ಮಾನವ ಹಕ್ಕುಗಳ ಮಿಷನ್ ಜಿಲ್ಲಾಧ್ಯಕ್ಷ ಎನ್ ಸಾಲುಮನ್ ರವರ ನೇತೃತ್ವದಲ್ಲಿ ಊಟದ ವ್ಯವಸ್ಥೆ ಮಾಡಿದರು.ಇನ್ನೂ ಮಂಡ್ಯ ಜಿಲ್ಲಾ ಮಾನವ ಹಕ್ಕುಗಳ ಮಿಷನ್ ಜಿಲ್ಲಾಧ್ಯಕ್ಷ ಎನ್ ಸಾಲುಮನ್ ವಾಹಿನಿಯೊಂದಿಗೆ ಮಾತನಾಡಿ ಕೋರೋನಾ ಸೋಂಕಿತರು ನಮ್ಮಂತೆಯೇ ಮನುಷ್ಯರು ಅವರಿಗೆ ಊಟ ನೀಡಲು ಹಿಂಜರಿಕೆ ಪಡುತ್ತಿದ್ದಾರೆ.ಅದಕ್ಕಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಇನ್ನೂ ಈ ಸಂದರ್ಭದಲ್ಲಿ ತಾಲ್ಲೂಕು ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷ ಸುಪ್ರೀತ್,ಉಪಾಧ್ಯಕ್ಷರಾದ ದೀವಿನ್,ಬಸವರಾಜು ಉಪಸ್ಥೀತರಿದ್ದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment