ಹೆತ್ತ ತಾಯಿಗೂ ಬೇಡವಾದ ಪುಟ್ಟ ಕಂದಮ್ಮ

ಲಿಂಗಸುಗೂರು :- ಆಗತಾನೆ ಜನಿಸಿದ ಹಸುಗೂಸನ್ನು ಮಾಸದ ಸಮೇತ ಜಮೀನೊಂದರಲ್ಲಿ ಮೇಲೆ ಎಸೆಸು ಹೋದ ಹೃದಯ ವಿದ್ರಾವಕ ಘಟನೆಯೊಂದು ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದಲ್ಲಿ ಘಟನೆ ಜರುಗಿದ್ದು, ಆಗತಾನೆ ಜನಿಸಿದ ಒಂದೇ ದಿನದ ಮಗುವನ್ನು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಮಾಸದ ಗಡ್ಡೆಯೊಂದಿಗೆ ಬಿಸಾಡಿದ್ದಾರೆ. ಮೇಲ್ನೋಟಕ್ಕೆ ನೋಡಿದಾಗ ಹೆಣ್ಣು ಮಗು ಎಂಬ ಕಾರಣಕ್ಕೆ ಹೀಗೆ ಬಿಸಾಡಿರಬಹುದೆಂಬ ಅನಮಾನ ವ್ಯಕ್ತಪಡಿಸಲಾಗುತ್ತಿದೆ. ಗ್ರಾಮದ ಕುಮಾರಗೌಡ ಎಂಬುವವರ ಜಮೀನಿನಲ್ಲಿ ಹೆಣ್ಣು ಮಗುವನ್ನು ಬಿಸಾಡಿದ್ದಾರೆ ಕಟುಕರು. ಹಸಿವಿನಿಂದ ಅಳುತ್ತಿದ್ದ ಮಗು ಬಹಿರ್ದೆಸೆಗೆ ತೆರಳಿದ ಮಲ್ಲಿಕಾರ್ಜುನ ಹಾಗೂ ಕಿರಣ್ ಎಂಬುವರು ಗಮನಿಸಿದ್ದಾರೆ. ಸ್ಥಳೀಯರಿಗೆ ಮಾಹಿತಿ ನೀಡಿದ್ದು ಮಗುವನ್ನು ರಕ್ಷಿಸಿದ್ದಾರೆ. ನಂತರ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಿಶುವಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆದೊಯ್ದರು. ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ-ವೀರೇಶ್ ಅರಮನಿ ಎಕ್ಸ್‌ಪ್ರೆಸ್‌ ಟಿವಿ ಲಿಂಗಸೂಗೂರು..

Please follow and like us:

Related posts

Leave a Comment