ಮಳವಳ್ಳಿಯಲ್ಲಿ ಮಳೆ ತಂದ ಅವಾಂತರ..!

ಮಳವಳ್ಳಿ :ಕಳೆದ ರಾತ್ರಿ ಬಿದ್ದ ಬಾರೀ ಮಳೆ ಹಾಗೂ ಬಿರುಗಾಳಿಗೆ ರೈತರ ಜಮೀನನಲ್ಲಿದ್ದ ತೆಂಗಿನ ಮರಗಳು , ವಿದ್ಯುತ್ ಕಂಬ , ಟ್ರಾನ್ಸ್ ಫಾರ್ಮರ್, ನೆಲೆಕ್ಕೆ ಉರುಳಿದ ಘಟನೆ ಮಳವಳ್ಳಿ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ನಡೆದಿದೆ.ಮಳವಳ್ಳಿ ತಾಲ್ಲೂಕಿನಾದ್ಯಂತ ಕಳೆದ ರಾತ್ರಿ 12ಗಂಟೆಯಿಂದ ಪ್ರಾರಂಭವಾದ ಮಳೆ ಬೆಳಗಿನ ಜಾವದವರೆಗೂ ಬಿದ್ದ ಭಾರೀ ಮಳೆ ಹಾಗೂ ಗುಡುಗು ಬಿರುಗಾಳಿಗೆ ರೈತರ ಜಮೀನಿನಲ್ಲಿ ಹಾಗೂ ರಸ್ತೆ ಬದಿಯಲ್ಲಿ ಹಾಕಿದ್ದ ತೆಂಗಿನಮರ ಹಾಗೂ ಇತರೆ ಮರಗಳು ಸೇರಿ 300 ಕ್ಕೂ ಹೆಚ್ಚು ಮರಗಳು ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ.ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗಿದ್ದು ಸೂಕ್ತ ಪರಿಹಾರಕ್ಕೆ ಸರ್ಕಾರವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಒಂದಡೆ ರೈತರ ಜಮೀನಿಗೆ ನೀರಾವರಿ ಇಲಾಖೆ ನೀರು ಬೀಡದೆ ಬೆಳೆ ಬೆಳೆಯಲು ವಿಳಂಬವಾಗುತ್ತದ್ದರೆ ಇನ್ನೂ ಜಮೀನನಲ್ಲಿ ತೆಂಗಿನಮರ ಗಳು ಸಹ ಹಾಕಿಕೊಂಡು ಅದರಲ್ಲೇ ಕೆಲವು ರೈತರು ಜೀವನ ಸಾಗುತ್ತಿದ್ದು . ಕಳೆದ ರಾತ್ರಿ ಬಿದ್ದ ಮಳೆ ಹಾಗೂ ಬಿರುಗಾಳಿಗೆ ಮರಗಳು ಮುರಿದುಬಿದ್ದ ಹಿನ್ನಲೆಯಲ್ಲಿ ರೈತರು ಅತಂಕಕ್ಕೆ ಒಳಾಗಿದ್ದಾರೆ ಸ್ಥಳಕ್ಕೆ ತಹಸೀಲ್ದಾರ್ ಬೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡಿಸಿಕೊಡಬೇಕಾಗಿ ರೈತರು ಮನವಿ ಮಾಡಿಕೊಂಡಿದ್ದಾರೆ.

ವರದಿ : ಎ.ಎನ್ ಲೋಕೇಶ್ .
ಎಕ್ಸ್‌ ಪ್ರೆಸ್‌ ಟಿವಿ
ಮಳವಳ್ಳಿ

Please follow and like us:

Related posts

Leave a Comment