ಜೆಡಿಎಸ್ ಶಾಸಕ ನಿಧನದ ಹಿನ್ನೆಲೆ ಶಿರಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ..!

ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯ ನಾರಾಯಣ ನಿಧನದ ಹಿನ್ನೆಲೆಯಲ್ಲಿ ಯಾವಾಗ ಬೇಕಾದರೂ ಉಪಚುನಾವಣೆ ಘೋಷಣೆ ಸಾಧ್ಯತೆದೆ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಶಿರಾ ಕ್ಷೇತ್ರವನ್ನ ಪಕ್ಷದ ವಶಕ್ಕೆ ಪಡೆಯಲು ಬಾಜಪ ಕಸರತ್ತು ನಡೆಸುತ್ತಿದೆ.
ಈಗಾಗಲೇ ಅಭ್ಯರ್ಥಿ ಘೋಷಣೆಯ ಮುನ್ನವೇ
ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಗೌಡ ಅವರು ನೇತೃತ್ವದಲ್ಲಿ
ಶಿರಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಘಟನೆ ನಡೆಸುತ್ತಿದ್ದಾರೆ.
ಇಂದು ಮಾಗೋಡು ಪಂಚಾಯ್ತಿ ಯ ಭೂತ್ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತಾನಾಡಿದ
ಜಿಲ್ಲಾ ಅಧ್ಯಕ್ಷರಾದ ಸುರೇಶ್ ಗೌಡ ಕ್ಷೇತ್ರದಲ್ಲಿ ಇದುವರೆಗೆ ನೀರಾವರಿ ವಿಚಾರದಲ್ಲಿ ಅಧಿಕಾರ ನೆಡೆಸಿದ ಪಕ್ಷಗಳು ಜನತೆಯ ಕಣ್ಣಿನಲ್ಲಿ ನೀರು ಭರಿಸಿದೆ ಈ ಬಾರಿ ಉಪ ಚುನಾವಣೆ ಯಲ್ಲಿ ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿಯನ್ನು ಅಯ್ಕೆ ನಮ್ಮ ರಾಜ್ಯ ನಾಯಕರು ಮಾಡಲ್ಲಿದ್ದು ಅವರಿಗೆ ಮತದಾರರ ಸಹಕಾರ ನೀಡಬೇಕು ರಾಜ್ಯ ಮತ್ತು ರಾಷ್ಟ್ರದಲ್ಲಿ ನಮ್ಮ ಪಕ್ಷ ಅಧಿಕಾರ ವಹಿಸಿಕೊಂಡ ಮೇಲೆ ಅನೇಕ ಬದಲಾವಣೆ ಮಾಡಲಾಗಿದೆ ಅದೆ ರೀತಿಯಲ್ಲಿ ಶಿರಾ ಕ್ಷೇತ್ರದಲ್ಲಿ ನೀರಾವರಿ ಯೋಜನ ಯಾದ ಮದಲೂರ ಕರೆಗೆ ನೀರು ಭದ್ರ ಯೋಜನೆಯ ಮೂಲಕ ತಾಲ್ಲೂಕಿನ ಎಲ್ಲಾ ಕರೆಗಳಿಗೆ ನೀರು ವಸತಿ ಸೌಕರ್ಯ ಮತ್ತು ಗ್ರಾಮದಲ್ಲಿ ವಿದ್ಯುತ್ ಮತ್ತಿತರ ಯೋಜನೆ ನೀಡುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಪಕ್ಷ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗುತ್ತದೆ.
ಎಂದರು ಹಾಗೂ ಪಕ್ಷವನ್ನು
ಕ್ಷೇತ್ರ ವ್ಯಾಪ್ತಿಯಲ್ಲಿ
ಅಧಿಕಾರಕ್ಕೆ ತರುವ ಉದ್ದೇಶ ಪೂರ್ವಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಕ್ರಮ ಬಗ್ಗೆ ಜನರಿಗೆ ತಿಳಿಸಲು ಪ್ರವಾಸ ಕೈಗೊಳ್ಳಲಾಗಿದೆ ಎಂದರು
ಈ ಸಂದರ್ಭದಲ್ಲಿ
ಮಾಜಿ ಶಾಸಕರಾದ ಸೊಗಡು ಶಿವಣ್ಣ,ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್ ಆರ್ ಗೌಡ್ರು, ಜಿಲ್ಲಾ ಪ್ರದಾನ ಕಾರ್ಯದರ್ಶಿ
ಬಿ.ಕೆ.ಮಂಜುನಾಥ್, ನಗರಾಧ್ಯಕ್ಷರಾದ ವಿಜಯರಾಜ್ ಹಾಗೂ ವಿವಿಧ ಮುಖಂಡರು
ಹಾಗೂ ಕಾರ್ಯಕರ್ತರು ಹಾಜರಿದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment