ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ : ಮನೆ ಬಾಗಿಲಿಗೆ ಬರುತ್ತೆ ಎಣ್ಣೆ!

ಬೆಂಗಳೂರು : ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ನ್ಯೂಸ್ ಬರಲಿದೆ. ಕುಡುಕರ ಹಾವಳಿ ತಪ್ಪಿಸಲು ಹಾಗು ಬಾರ್ ಬಳಿ ಅಂತರ ಕಾಯ್ದುಕೊಳ್ಳಲು ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಇನ್ಮುಂದೆ ಕುಡುಕರು ಬಾರ್ಗೆ ಬರುವ ಬದಲು ಮನೆ ಬಾಗಿಲಿಗೇ ಎಣ್ಣೆ ತಲುಪಿಸುವ ಸೇವೆ ರಾಜ್ಯ ಸರ್ಕಾರ ಶ್ರೀಘ್ರದಲ್ಲೇ ಜಾರಿ ಮಾಡಲಿದೆ. ವ್ಯಾಪಾರಿಗಳು ಹಾಗು ಕುಡುಕರ ನಡುವೆ ಅಂತರ ಕಾಯ್ದುಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಆನ್ಲೈನ್ ಮೂಲಕ ಮದ್ಯ ಮಾರಾಟಕ್ಕೆ ಸಿದ್ಧತೆ ನಡೆಸಿರುವ ಸರ್ಕಾರ ಇದಕ್ಕಾಗಿ ಅಬಕಾರಿ ಇಲಾಖೆಯ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಆನ್ಲೈನ್ ಮೂಲಕ ಮದ್ಯ ಮಾರಾಟ ನಡೆಸುತ್ತಿರುವ ಒರಿಸ್ಸಾ ಹಾಗು ಜಾರ್ಖಂಡ್ ರಾಜ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ಇನ್ನು ಕೆಲವೊಮ್ಮೆ ಮಕ್ಕಳು ಆನ್ ಲೈನ್ ನಲ್ಲಿ ಎಣ್ಣೆ ಆರ್ಡರ್ ಮಾಡ್ತಾರೆ. ಅದು ಗೊತ್ತಾಗಲ್ಲ. ಇಂಥಹದ್ದನ್ನ ತಡೆಗಟ್ಟೋಕೆ ಏನೆಲ್ಲಾ ಮಾಡ್ಬೇಕು ಅನ್ನೋ ಬಗ್ಗೆ ಚಿಂತನೆ ನಡೆಸಲಾಗ್ತಿದೆ. ಕೆಲವರು ವಿರೋಧ ಕೂಡ ಮಾಡಿದ್ದಾರೆ. ತಜ್ಞರು, ಬುದ್ದಿಜೀವಿಗಳ ಜೊತೆ ಚರ್ಚೆ ಮಾಡುತ್ತೇವೆ. ವರದಿ ಬಂದ್ಮೇಲೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗದುಕೊಳ್ಳುತ್ತೇವೆ ಅಂತ ಅಬಕಾರಿ ಸಚಿವ ಹೆಚ್.ನಾಗೇಶ್ ತೀಳಿಸಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment