ಅವ್ಯವಸ್ಥೆಯಿಂದ ಕೂಡಿದ ಚರಂಡಿ! ಬಿದಿಗಿಳಿದು ಹೋರಾಟಕ್ಕೆನಿಂತ ಹುಬ್ಬಳ್ಳಿ ಜನತೆ!!

ಹುಬ್ಬಳ್ಳಿ- ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದಲ್ಲಾ ಒಂದು ಸಮಸ್ಯೆ ಉದ್ಭವವಾಗುತ್ತಿವೆ, ನಗರದ ನಿವಾಸಿಗಳಿಗೆ ಉತ್ತಮ ಚರಂಡಿ ವ್ಯವಸ್ಥೆ ಮಾಡಬೇಕಿದ್ದ ಪಾಲಿಕೆ ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಸ್ಥಳಿಯರು ಬಿದಿಗಿಳಿದು ಹೋರಾಟ ಮಾಡುವ ಪ್ರಸಂಗ ಬಂದೊದಗಿದೆ.ಹುಬ್ಬಳ್ಳಿ ವಾರ್ಡ್ ನಂಬರ್ 65 ರ ಅಲ್ತಾಪ್ ನಗರದಲ್ಲಿ ಕಳೆದ ಆರು ತಿಂಗಳಿಂದ ಚರಂಡಿ ವ್ಯವಸ್ಥೆ ಮಾಡದೇ ಇರುವುದರಿಂದ ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.ಚರಂಡಿ ಒಳಗೆ ಹರಿಯಬೇಕಿದ್ದ ನೀರು ಮನೆಯ ಒಳಗೆ ಮತ್ತು ಕುಡಿಯುವ ನೀರಿನ ಟ್ಯಾಂಕ್ ಒಳಗೆ ನುಗ್ಗುತ್ತಿದೆ. ಇಂತಹ ನೀರು ಕುಡಿದರೆ ಆರೋಗ್ಯದ ಸ್ಥಿತಿ ಏನಾಗಬಾರದು ಎಂದು ಸ್ಥಳಿಯರು ಪ್ರಶ್ನಿಸಿದ್ದಾರೆ. ಇನ್ನೂ ಸಮಸ್ಯೆ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲದಕ್ಕೇ ರೊಚ್ಚಿಗೆದ್ದ ಸ್ಥಳಿಯ ನಿವಾಸಿಗಳು ಮಹಾನಗರ ಪಾಲಿಕೆ ಮತ್ತು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ನಗರ ಸ್ವಚ್ಚತಾ ಬಗ್ಗೆ ಮಾತನಾಡುವ ಪಾಲಿಕೆ, ನಗರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಯಿಗಿದೆ. ಸುಮಾರು ಆರು ತಿಂಗಳು ಆಗಿದೆ.ಅವ್ಯವಸ್ಥೆ ಚರಂಡಿಯಲ್ಲಿ ಜೀವನ ನಡೆಸುತ್ತಿರುವ ಇವರಿಗೆ ಕೊರಾನಾ ಎಂಬ ಮಹಾಮಾರಿಗಿಂತ ಇನ್ನಿತರ ರೋಗಗಳು ಬರುವ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದಾರೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಚರಂಡಿ ವ್ಯವಸ್ಥೆ ಕಲ್ಪಿಸಿದೆ ಹೋದರೆ ಮುಂದಿನ ದಿನಗಳಲ್ಲಿ ಸ್ಥಳಿಯರು ಎಲ್ಲರೂ ಸೇರಿಕೊಂಡು ಪಾಲಿಕೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.ಒಟ್ಟಿನಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಈಗ ಸ್ಥಳಿಯರು ಹಲವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೇ, ತಕ್ಷಣವೇ ಪಾಲಿಕೆ ಅಧಿಕಾರಿಗಳು ಉತ್ತಮ ಚರಂಡಿ ವ್ಯವಸ್ಥೆ ಮಾಡಿಕೊಟ್ಟರೇ ಹುಬ್ಬಳ್ಳಿ ಜನತೆ ಸುಗಮವಾಗಿ ಜೀವನ ಸಾಗಿಸಬಹುದಾಗಿದೆ..

ವರದಿ-ರಾಜು ಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ..

Please follow and like us:

Related posts

Leave a Comment