ಬ್ರಹ್ಮನಾರಾಯಣ ಗುರೂಜಿಯವರ ಜಯಂತಿಗೆ ಸಿಬ್ಬಂದಿಗಳು ಗೈರು ಹಾಜರ್- ಕ್ರಮ ಕೈಗೊಳ್ಳುವಂತೆ ಹೆಚ್.ಎನ್ ಬಡಿಗೇರ ಆಗ್ರಹ..!

ಸಿಂಧನೂರು: ತಾಲ್ಲೂಕು ದಂಡ ಅಧಿಕಾರಿಗಳು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖಂಡ ಹೆಚ್.ಎನ್. ಬಡಿಗೇರ ಆಗ್ರಹಿಸಿದರು. ನಗರದ ತಹಶಿಲ್ದಾರ ಕಚೇರಿಯಲ್ಲಿ ಶ್ರೀ ಬ್ರಹ್ಮ ನಾರಾಯಣ ಗುರೂಜಿಯವರ 166 ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ತಾಲ್ಲೂಕು ದಂಡ ಅಧಿಕಾರಿ ಮಂಜುನಾಥ ಭೋಗವಾತಿ ಹಾಗೂ ಅವರ ಸಿಬ್ಬಂದಿಗಳು ಈ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಗೈರು ಹಾಜರಿದ್ದರು. ಇದರಿಂದ ವಿವಿಧ ಪಕ್ಷದ ಮುಖಂಡರು ತಹಶಿಲ್ದಾರ ನೆಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮುಖಂಡ ಹೆಚ್.ಎನ್.ಬಡಿಗೇರ ಮಾತನಾಡಿ ಸರ್ಕಾರವು ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವುದು ಅವರ ತತ್ವ ಸಿದ್ಧಾಂತಗಳನ್ನು ಹಿಂದಿನ ಯುವ ಜನರಿಗೆ ತಿಳಿಸುವ ಉದ್ದೇಶದಿಂದ ಆದರೆ ತಹಶಿಲ್ದಾರ ಹಾಗೂ ಸಿಬ್ಬಂದಿಗಳು ಯಾವುದೇ ಜಯಂತಿಗಳಲ್ಲಿ ಭಾಗವಹಿಸುವುದಿಲ್ಲ.ಇವರ ಮೇಲೆ ಜಿಲ್ಲಾಧಿಕಾರಿಯವರು ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ಮತ್ತೇ ಈ ರೀತಿ ಆಗದಂತೆ ನೋಡಿ ಕೊಳ್ಳಬೇಕು ಇಲ್ಲವೇ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಎಮ್.ದೊಡ್ಡ ಬಸವರಾಜ.ರಾಯಪ್ಪ ವಕೀಲರು. ನಿರುಪಾಧಿ ವಕೀಲರು,ಜಿಲಾನೀಪಾಷ,ಸೇರಿದಂತೆ ಅನೇಕರು ಉಪಸ್ಥಿತಿಯಿದ್ದರು.

ವರದಿ- ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment