ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತರಭೇತಿ ಶಿಬಿರ..!

ಮಳವಳ್ಳಿ: ಅರೋಗ್ಯ ಹಸ್ತ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾಗಿರುವ ಕೋರೋನಾ ವಾರಿಯರ್ಸ್ ಗಳಿಗೆ ತರಭೇತಿ ಶಿಬಿರವನ್ನು ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕ ಪಿ.ಎಂ ನರೇಂದ್ರ ಸ್ವಾಮಿರವರ ನೇತೃತ್ವದಲ್ಲಿ ಡಾ.ಭಗತ್ ರಾಜ್ ರವರು ಕಾಂಗ್ರೇಸ್ ಕಾರ್ಯಕರ್ತರಿಗೆ, ಕೋರೋನಾ ವಾರಿಯಸ್೯ಗಳಿಗೆ ತರಬೇತಿಯನ್ನು ನೀಡಲಾಯಿತು.ಇನ್ನೂ ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿರವರು ಮಾತನಾಡಿ, ಕೋರೋನಾ ಸೋಂಕು ರಾಜ್ಯ ವ್ಯಾಪ್ತಿ ದಿನೆದಿನೇ ಹೆಚ್ಚಾಗುತ್ತಿದ್ದು ಇದಕ್ಕೆ ನಮಗೆ ಅರಿವು ಇಲ್ಲದಿರುವುದರಿಂದ ಮೊದಲು ಸಾಮಾಜಿಕ ಅಂತರ , ಮಾಸ್ಕ್ ,ಸ್ಯಾನಿಟರಿ ಬಳಸಬೇಕು ಎಂಬ ಸಾಮಾನ್ಯ ಅರಿವುಗಳು ಜನರಲ್ಲಿ ಮೂಡಬೇಕು ಎಂದರು.ಇನ್ನೂ ಕಾಂಗ್ರೇಸ್ ಪಕ್ಷದ ವತಿಯಿಂದ ಆರೋಗ್ಯ ಹಸ್ತ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕೇವಲ. ಡಾಕ್ಟರ್ ,ನಸ್೯ಗಳು,ಕೋರೋನಾ ವಾರಿಯಸ್೯ಯಾದರೆ ಸಾಲದು ನಮ್ಮ ಪಕ್ಷದ ಕಾರ್ಯಕರ್ತರು ಸಹ ವಾರಿಯಸ್೯ಯಾಗಿ ಸೇವೆ ಸಲ್ಲಿಸುವ ದೃಷ್ಟಿಯಿಂದ ವೈದ್ಯರಿಂದ ತರಬೇತಿ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದ ಅಮೂಲ್ಯ ಹಾಗೂ ಹರ್ಷಿತಾ, ಎಸ್ ಎನ್ ಸಾಗ್ಯ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ದೇವರಾಜು ,ಸುಂದರರಾಜ್, ಉಪಾಧ್ಯಕ್ಷ ಶಿವಕುಮಾರ,ತಾ.ಪಂ ಅಧ್ಯಕ್ಷ. ಸುಂದರೇಶ್, ಉಪಾಧ್ಯಕ್ಷ ಮಾಧು, ಯುವ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಮೂರ್ತಿ, ಆರೋಗ್ಯ ಹಸ್ತ ಉಸ್ತುವಾರಿ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಸುರೇಶಕಂಠಿ,ತಾ.ಪಂ‌ಮಾಜಿ ಅಧ್ಯಕ್ಷ ನಾಗೇಶ್ ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.
ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment