ಸವಿತಾ ಸಮಾಜದ ಮಹಿಳೆಯರು ಸ್ವಾವಲಂಬಿಗಳಾಗಬೇಕು-ಟಿ.ಜೆ.ವಿಜಯಕುಮಾರ್ ಕರೆ..!

ತಿಪಟೂರು:ಸವಿತಾ ಸಮಾಜದ ಮಹಿಳೆಯರು ಬ್ಯುಟಿಷಿಯನ್ ,ಟೈಲರಿಂಗ್,ಇನ್ನಿತರೇ ಕರಕುಶಲ ಕಲೆಗಳ ತರಭೇತಿ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಾಲ್ಲೂಕು ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಟಿ.ಜೆ.ವಿಜಯಕುಮಾರ್ ರವರು ಕರೆ ನೀಡಿದರು. ತಾಲ್ಲೂಕಿನ ಕಸಬಾ ಹೋಬಳಿ ರಂಗಾಪುರ ಗ್ರಾಮದಲ್ಲಿ ರಚನೆಗೊಂಡ ಶ್ರೀ ರಂಗ ಸವಿತಾ ಸಮಾಜ ಮಹಿಳಾ ಸ್ವಸಹಾಯ ಸಂಘವನ್ನು ಉದ್ಘಾಟನೆಗೊಳಿಸಿ ಮಾತನಾಡುತ್ತಾ, ಸ್ವಸಹಾಯ ಗುಂಪುಗಳಿಂದ ಮಹಿಳೆಯರು ಆರ್ಥಿಕವಾಗಿ,ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯ ಬಹುದಾಗಿದೆ,ಈ ರೀತಿಯ ಗುಂಪುಗಳನ್ನು ತಾಲ್ಲೂಕಿನ ಎಲ್ಲಾ ಸವಿತಾ ಸಮಾಜದವರು ರಚನೆ ಮಾಡಿಕೊಂಡು ಮುಂದುವರೆಯಲು ನಮ್ಮ ಸಂಘದಿಂದ ಅಗತ್ಯ ಸಲಹೆ ಸಹಕಾರ ನೀಡಲಾಗುವುದು, ರಾಜ್ಯ ಸರ್ಕಾರದಿಂದ ಈಗಾಗಲೇ ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಈ ನಿಗಮ ಮಂಡಳಿ ವತಿಯಿಂದ ಸ್ವಯಂ ಉದ್ಯೋಗ ನಡೆಸುವ ನಮ್ಮ ಸಮಾಜದ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡಲಾಗುವುದು, ಈ ನೆರವು ಪಡೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗ ಬಹುದಾಗಿದೆ, ಹೆಣ್ಣು ಸಂಸಾರದ ಕಣ್ಣು ಆದ್ದರಿಂದ ನಿಮ್ಮ ಕುಟುಂಬದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ,ಸ್ವಸಹಾಯ ಗುಂಪುಗಳಲ್ಲಿ ಉಳಿತಾಯಕ್ಕೆ ಮಹತ್ವ ನೀಡಿ ಆರ್ಥಿಕವಾಗಿ ಮುಂದುವರೆಯಬೇಕೆಂದು ಸಲಹೆ ನೀಡಿದರು, ಕಾರ್ಯಕ್ರಮದಲ್ಲಿ ತಾಲ್ಲೂಕು ಸವಿತಾ ಸಮಾಜದ ಸಂಘಟನಾ ಕಾರ್ಯದರ್ಶಿ ನಾಗರಾಜು.ಜಿ. ಸಂಚಾಲಕರಾದ ಶ್ರೀಧರ್ ಬಾಬು, ಸವಿತಾ ಯುವ ಘಟಕದ ನಿರ್ದೇಶಕರುಗಳಾದ ಮೋಹನ್ ಕುಮಾರ್.ಪಿ, .ಎಸ್.ಆರ್.ಶಂಕರಮುರ್ತಿ,ಆನಂದ್ ,ಗುರುಮುರ್ತಿ, ದಿನೇಶ್ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

ವರದಿ-ಸಿದ್ದೇಶ್ ಎಕ್ಸ್ ಪ್ರೆಸ್ ಟಿವಿ ತಿಪಟೂರು..

Please follow and like us:

Related posts

Leave a Comment