ಪಬ್ಜಿ ಸೇರಿದಂತೆ 118 ಚೀನಾ ಆ್ಯಪ್ ನಿಷೇಧ ಮಾಡಿದ ಭಾರತ..!

ನವದೆಹಲಿ :ದೇಶದ ಸುರಕ್ಷತೆ ಮತ್ತು ರಕ್ಷಣೆಗಾಗಿ ಚೀನಾ ಮೂಲದ 118 ಆ್ಯಪ್ಗಳನ್ನ ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಪಬ್‌ಜಿ, ಲಿವಿಕ್ ಹಾಗು ವಿ ಚ್ಯಾಟ್ ಸೇರಿದಂತೆ 118 ಆ್ಯಪ್‌ಗಳನ್ನ ಭಾರತ ಬ್ಯಾನ್ ಮಾಡಿದೆ.ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಈ ವರ್ಷದ ಜೂನ್ನಲ್ಲಿ ಟಿಕ್ಟಾಕ್, ಯುಸಿ ಬ್ರೌಸರ್, ಸೇರಿದಂತೆ ಚೀನಾದ ಲಿಂಕ್ ಹೊಂದಿರುವ 59 ಅಪ್ಲಿಕೇಷನ್ಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆ್ಯಪ್ಗಳನ್ನ ಬ್ಯಾನ್ ಮಾಡಿತ್ತು. ಈಗಾ ಮತ್ತೇ ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡುವುದರ ಮುಖಾಂತರ ಚೀನಾಗೆ ಭಾರತ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment