ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಪ್ರಶಾಂತ್ ಸಂಬರಗಿ..!

ಬೆಂಗಳೂರು : ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೇ ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್ ಸಂಬರಗಿ ಮಾತನಾಡಿದ್ದು ಕಾಂಗ್ರೇಸ್ ಪಕ್ಷದ ಶಾಸಕ ಜಮೀರ್ ಅಹ್ಮದ್ ಮೇಲೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಜಮೀರ್ ಅಹಮದ್ ನ 50 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಂಬೈನಿಂದ ಹಿಂದಿ ಚಿತ್ರರಂಗದ ನಿರ್ಮಾಪಕ ಇಮ್ತಿಯಾಜ್ ಕಾತ್ರಿ ಬೆಂಗಳೂರಿಗೆ ಆಗಮಿಸಿದ್ದರು, ನಿರ್ಮಾಪಕನಿಗೂ ಜಮೀರ್ ಅಹಮದ್ ಗೂ ಏನು ಸಂಬಂಧ..? ಎಂದು ಪ್ರಶಾಂತ್ ಸಂಬರಗಿ ಪ್ರಶ್ಣಿಸಿದ್ದರು.ನಿಮಾ ಕ್ಷೇತ್ರವಷ್ಟೇ ಅಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಡ್ರಗ್ ಮಾಫಿಯಾ ಇದೆ. ಎಂದು ಆರೋಪಿಸಿದರು.ಇನ್ನೂ ಮುಂಬೈನಲ್ಲಿ ಇಮ್ತಿಯಾಜ್ ಕಾತ್ರಿ ಪಾರ್ಟಿಯನ್ನು ಆಯೋಜಿಸಿದ್ದರು ಆಪಾರ್ಟಿಗೆ ಸ್ಯಾಂಡಲ್ ವುಡ್ ನ ಕೆಲ ಕಲಾವಿದರು ಪಾಲ್ಗೊಂಡಿದ್ದರು. ಆ ಪಾರ್ಟಿಯಲ್ಲಿ ಭಾಗಿಯಾಗಿದ್ದವರೇ ಡ್ರಗ್ ಮಾಫಿಯಾದಲ್ಲಿ ಒಳಗೊಂಡಿರಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಡುವ ರೀತಿ ಮಾತನಾಡಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment