ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಡಿಜಿಪಿ ಮೀಟಿಂಗ್ ಬೆನ್ನಲ್ಲೇ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ದೇಶಪಾಂಡೆ ನಗರದ ಚರ್ಚ್ ಬಳಿ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.ಗದಗ ಮೂಲದ ಮಾರುತಿ ಹರಣಕಾಶಿ, ಚಂದಪ್ಪ ಹರಣಕಾಶಿ ಬಂಧಿತರು ಆರೋಪಿಗಳಾಗಿದ್ದು ಇವರಲ್ಲಿ ಇದ್ದಂತಹ ಸುಮಾರು ಐದು ಕೆಜಿ ಗಾಂಜಾ, ಒಂದು ಬೈಕ್ ಸೇರಿ 90 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಡಿಜಿಪಿ ಸಭೆಯಲ್ಲಿ ಬಿಸಿಯೂಟದ ಸಹಾಯಕ ನಿರ್ದೇಶಕ ಜಯಪ್ರಕಾಶ್, ಕ್ಷೇತ್ರ ಸಮಾನ್ವಯಾಧಿಕಾರಿ ಯೋಗೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್,ಕಾಳೇರಾಜೇಗೌಡರು, ಬಿಆರ್ ಸಿ ಸಂಘದ ಅಧ್ಯಕ್ಷ ಬೋರಯ್ಯ, ರೇವಣ್ಣ ಸಿದ್ದಪ್ಪ, ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment