ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ- ವಿಧ್ಯಾರ್ಥಿನಿಗೆ ಕಾಂಗ್ರೇಸ್ ಉಪಾಧ್ಯಕ್ಷ ಶಿವಕುಮಾರ್ ರಿಂದ ಸನ್ಮಾನ..!

ಮಳವಳ್ಳಿ: ಮಳವಳ್ಳಿ ಪಟ್ಟಣದ 4 ನೇ ವಾರ್ಡ್ ನಲ್ಲಿ ವಾಸವಾಗಿರುವ ಎಮ್ಎನ್ ಅಮೂಲ್ಯ SSLC ಪರೀಕ್ಷೆಯಲ್ಲಿ 623 ಅಂಕಗಳನ್ನ ಪಡೆದು ಜಿಲ್ಲೆಗೆ ಎರಡನೇ ಸ್ಥಾನಗಳಿಸಿದ್ದಾರೆ ಬಡತನವ ಮೀರಿ ಸಾಧನೆಗೈದ ಇವರ ಸಾಧನೆಯನ್ನು ಗೌರವಿಸಿ ಪ್ರೋತ್ಸಾಹಿಸಲು ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಶಿವಕುಮಾರ್ 4 ನೇ ವಾರ್ಡ್ ಅಮೂಲ್ಯಳಿಗೆ ಸನ್ಮಾನಿಸಿ ಅಭಿನಂದಿಸಿದರು. ಮಳವಳ್ಳಿ ಪಟ್ಟಣದ 4 ನೇ ವಾರ್ಡ್ ನಲ್ಲಿರುವ ಅಮೂಲ್ಯ ಮನೆಗೆ ತೆರಳಿ ಅಭಿನಂದಿಸಿದರು. ಬಳಿಕ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್ ರವರು ವಾಹಿನಿಯೊಂದಿಗೆ ಮಾತನಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ಕ್ಷೌರಿಕ ವೃತ್ತಿಯನ್ನು ಅವಲಂಬಿಸಿರುವ ಬಡ ನಾಗರಾಜ ಮತ್ತು ಶಿಲ್ಪರವರ ಮಗಳಾದ ಎಮ್ ಎನ್ ಅಮೂಲ್ಯರವರು ಸರ್ಕಾರಿ ಆದರ್ಶ ವಿದ್ಯಾಶಾಲೆಯಲ್ಲಿ ವ್ಯಾಸಂಗ ಮಾಡಿ SSLCಯಲ್ಲಿ 623 ಅಂಕಗಳಿಸಿ ಜಿಲ್ಲೆಗೆ ಎರಡನೆ ಸ್ಥಾನ ಮತ್ತು ರಾಜ್ಯಕ್ಕೆ ಮೂರನೆ ಸ್ಥಾನಗಳಿಸಿರುವುದು ಬಹಳ ಹೆಮ್ಮೆಯ ವಿಚಾರ ಶ್ರದ್ದೆಯಿಂದ ಕಲಿತರೆ ಸರ್ಕಾರಿ ಶಾಲೆಯಲ್ಲೂ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆಯತ್ತದೆ ಎಂಬುದನ್ನ ಸಾಬೀತು ಪಡಿಸಿದ್ದಾರೆ ಇಂತಹ ಪ್ರತಿಭಾವಂತ ಮಕ್ಕಳನ್ನು ಸಮಾಜ ಗೌರವಿಸಿ ಸಹಾಯ ಮಾಡಬೇಕೆಂದು ಕಾಂಗ್ರೇಸ್ ಉಪಾಧ್ಯಕ್ಷ ಶಿವಕುಮಾರ್ ರವರು ನಾಗರಿಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ರವರು 10 ಸಾವಿರ ರೂ ನಗದು ಪ್ರೋತ್ಸಾಹ ಧನ ನೀಡಿದರು. ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ನಾಗೇಶ್, ಮಾಜಿ ಪುರಸಭಾಧ್ಯಕ್ಷ ಗಂಗರಾಜೇ ಅರಸು,ವಾರ್ಡ್ ನ ಯುವಕರಾದ ಪುಟ್ಟು, ಯೋಗೇಶ್, ಸಂತೋಷ ,ದರ್ಶನ್ ಅಮೂಲ್ಯರ ತಂದೆ ನಾಗರಾಜ್ ತಾಯಿ ಶಿಲ್ಪ ಉಪಸ್ಥಿತರಿದ್ದರು.

ವರದಿ: ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment