ಬಸ್ ಹತ್ತಲು ಹೋಗಿ ಬಿದ್ದು 6 ತಿಂಗಳ ಗರ್ಭಿಣಿ ಸಾವು..!

ಕಣ್ಣೂರು: ಬಸ್ ಹತ್ತಲು ಹೋಗಿ ಆಯತಪ್ಪಿ ಬಿದ್ದು 6 ತಿಂಗಳ ಗರ್ಭಿಣಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. 27 ವರ್ಷದ ದಿವ್ಯಾ ಮೃತ ನರ್ಸ್. ದಿವ್ಯಾ ಕಣ್ಣೂರಿನ ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ದಿವ್ಯಾ ಮನೆಯ ಸಮೀಪವಿರುವ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಿವ್ಯಾ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಆಗ ಬಸ್ ಕೆಲವು ಮೀಟರ್ ಮುಂದೆ ಹೋಗಿ ನಿಲ್ಲಿಸಿದೆ. ಆಗ ನರ್ಸ್ ಬಸ್ಸಿನ ಕಡೆಗೆ ಓಡಿ ಹೋಗುತ್ತಿದ್ದಾಗ ರಸ್ತೆಯ ಮೇಲೆ ಬಿದ್ದಿದ್ದಾರೆ. ಬಸ್ ನಿಲ್ದಾಣದ ಬಳಿ ಡ್ರಾಪ್ ಮಾಡಲು ಬಂದಿದ್ದ ಪತಿ ವಿನು ಎದುರೇ ಬಿದ್ದಿದ್ದಾರೆ. ತಕ್ಷಣ ಪತಿ ವಿನು ಸ್ಥಳದಲ್ಲಿದ್ದವರ ಸಹಾಯದಿಂದ ದಿವ್ಯಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ದಾರಿಯ ಮಧ್ಯದಲ್ಲೇ ದಿವ್ಯಾ ಮೃತಪಟ್ಟಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment